Advertisement
ತಡರಾತ್ರಿ ಹೋರಾಟಗುರುವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ಮತ್ತು ದಿಲ್ಲಿ ಸೆಷನ್ಸ್ ಕೋರ್ಟ್‌ಗಳಲ್ಲಿ ಪವನ್ ಮತ್ತು ಮುಕೇಶ್ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತವಾದವು. ಹೀಗಾಗಿ ಅವರ ಎಲ್ಲ ಕಾನೂನು ಹಾದಿಗಳು ಬಂದ್ ಆದವು. ಆದರೂ ಗುರುವಾರ ರಾತ್ರಿ 9 ಗಂಟೆ ವೇಳೆಗೆ ಈ ಅಪರಾಧಿಗಳು ನೇಣು ಶಿಕ್ಷೆಗೆ ತಡೆ ಕೋರಿ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ತಡರಾತ್ರಿಯೇ ಅರ್ಜಿ ವಿಚಾರಣೆ ನಡೆಯಿತು. ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ವಾದ ಮಂಡಿಸಿದರು.
ನಿರ್ಭಯಾ ಪ್ರಕರಣ ನಾಲ್ವರೂ ಹಂತಕರ ಮುಂದಿದ್ದ ಕಾನೂನಾತ್ಮಕ ಪರಿಹಾರಗಳೆಲ್ಲವೂ ಮುಗಿದಿದ್ದರಿಂದ ಗುರುವಾರ ಸಂಜೆಯೇ ದಿಲ್ಲಿಯ ತಿಹಾರ್ ಜೈಲಿನ ಅಧಿಕಾರಿಗಳು ನೇಣಿಗೇರಿಸುವ ಪೂರ್ವಸಿದ್ಧತೆ ಮುಗಿಸಿದರು.