Advertisement

ನಿರ್ಭಯಾ: ಕ್ಷಮಾದಾನ ಪ್ರಕ್ರಿಯೆಯಲ್ಲಿ ಲೋಪ ; ಹಂತಕ ಶರ್ಮಾ ಹೊಸ ತಕರಾರು

10:06 AM Mar 15, 2020 | Team Udayavani |

ಹೊಸದಿಲ್ಲಿ: ನಿರ್ಭಯಾ ಹಂತಕರಲ್ಲೊಬ್ಬನಾದ ವಿನಯ್‌ ಶರ್ಮಾ, ತಾನು ಈ ಹಿಂದೆ ರಾಷ್ಟ್ರಪತಿಯವರಿಗೆ ಸಲ್ಲಿಸಲಾಗಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿರುವುದರ ಹಿಂದೆ ಆಡಳಿತಾತ್ಮಕವಾಗಿ ಕೆಲವು ಲೋಪಗಳಾಗಿವೆ ಎಂದು ಆರೋಪಿಸಿ ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾನೆ.

Advertisement

ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಕ್ರಿಯೆಯಲ್ಲಿ ಎರಡು ಬಗೆಯ ಲೋಪ ಗಳಾಗಿವೆ ಎಂದು ಆತ ದೂರಿದ್ದಾನೆ. ಮೊದಲನೆಯದಾಗಿ, ರಾಷ್ಟ್ರಪತಿಯವರಿಗೆ ತನ್ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವಂತೆ ದಿಲ್ಲಿ ಸರಕಾರ ಶಿಫಾರಸು ಮಾಡಿತ್ತು. ಆದರೆ ಆ ಶಿಫಾರಸು ಪತ್ರದಲ್ಲಿ ದಿಲ್ಲಿ ಗೃಹ ಸಚಿವರ ಸಹಿ ಇರಲಿಲ್ಲ. ಅನಂತರ, ದಿಲ್ಲಿಯ ಗೃಹ ಸಚಿವ ಸತ್ಯೇಂದರ್‌ ಜೈನ್‌ರವರ ಸಹಿಯನ್ನು ವಾಟ್ಸ್‌ ಆ್ಯಪ್‌ ಮೂಲಕ ಪಡೆದು ಲಗತ್ತಿಸಲಾಗಿದೆ. ಈ ಪ್ರಕ್ರಿಯೆ ಸರಿಯಾದದ್ದಲ್ಲ ಎಂದು ಆತ ವಾದಿಸಿದ್ದಾನೆ.

ಎರಡನೆಯದಾಗಿ, ತನ್ನ ಕ್ಷಮಾದಾನ ಅರ್ಜಿ ಸಲ್ಲಿಕೆಯಾದ ಕಾಲಘಟ್ಟದಲ್ಲಿ ದಿಲ್ಲಿಯಲ್ಲಿ ಚುನಾವಣ ಕಾವು ಇತ್ತು. ಆಗ, ಜೈನ್‌ ಅವರು ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದರಷ್ಟೇ. ಹಾಗಿರುವಾಗ ಅವರು ಗೃಹ ಸಚಿವರಾಗಿ ಸಹಿ ರವಾನಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾನೆ.

ಇಂಥ ಲೋಪಗಳುಳ್ಳ ಪ್ರಕ್ರಿಯೆಗಳ ಅನಂತರ ರಾಷ್ಟ್ರಪತಿಯವರಿಂದ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿರುವುದು ಸಂವಿಧಾನವು ನೀಡಿರುವ ಸರ್ವರಿಗೂ ಕಾನೂನು ಎಂಬ ಹಕ್ಕಿಗೆ ಚ್ಯುತಿ ತಂದಿದೆ ಎಂದು ಆತ ಆಪಾದಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next