Advertisement

ಜೂ.27ರವರೆಗೆ ನೀರವ್‌ಗೆ ಜೈಲು

12:58 AM May 31, 2019 | Lakshmi GovindaRaj |

ಲಂಡನ್‌: ಉದ್ಯಮಿ ನೀರವ್‌ ಮೋದಿಗೆ ಜೂನ್‌ 27 ರ ವರೆಗೂ ಯುನೈಟೆಡ್‌ ಕಿಂಗ್‌ಡಮ್‌ ನ್ಯಾಯಾಲಯ ಜೈಲುವಾಸ ಅವಧಿ ವಿಸ್ತರಣೆ ಮಾಡಿದೆ.

Advertisement

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 12 ಸಾವಿರ ಕೋಟಿ ರೂ. ಮೋಸ ಮಾಡಿದ ನೀರವ್‌ ಮೋದಿಯ ವಿರುದ್ಧ ಗಡೀಪಾರು ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಗುರುವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಅಲ್ಲದೆ, ನೀರವ್‌ ಮೋದಿಯನ್ನು ಯಾವ ಜೈಲಿನಲ್ಲಿಡಲಾಗುತ್ತದೆ ಮತ್ತು ಆ ಜೈಲಿನ ಸ್ಥಿತಿಗತಿಗಳ ವಿವರವನ್ನು 14 ದಿನಗಳೊಳಗೆ ನೀಡುವಂತೆ ಭಾರತೀಯ ಅಧಿಕಾರಿಗಳಿಗೆ ಸೂಚಿಸಿದೆ. ಕಳೆದ ಮಾರ್ಚ್‌ 19 ರಂದು ಇಂಗ್ಲೆಂಡ್‌ನ‌ ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next