Advertisement
ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಪಡೆಯುವ ಹಿನ್ನೆಲೆಯಲ್ಲಿ ತಾಲೂಕಿನ ಕಾಗಿನೆಲೆಯಲ್ಲಿರುವ ಕನಕಗುರು ಪೀಠದ ನೇತೃತ್ವದಲ್ಲಿ ಹಮ್ಮಿಕೊಂಡ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿರುವ ನಾಲ್ವರು ಮಂತ್ರಿಗಳು ಕುರುಬ ಸಮುದಾಯವನ್ನು ಎಸ್‌ಟಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಬೇಕು. ಕೇಂದ್ರಕ್ಕೆ ಶಿಫಾರಸ್ಸು ಹೋದ ಬಳಿಕ ನಾಲ್ವರು ಮಂತ್ರಿಗಳು ಸೇರಿ ನಿಯೋಗ ಹೋಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಎಸ್‌ಟಿಗೆ ಸೇರಿಸುವಂತೆ ಒತ್ತಾಯ ಮಾಡಲಾಗುವುದು ಎಂದರು.ಕಟ್ಟಕಡೆಯ ಕುರುಬ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಅಂತಹ ಕುರುಬರಿಗೆ ಸಾಮಾಜಿಕ ನ್ಯಾಯ ಒದಗಿಸುವ ಆಲೋಚನೆಯಿಂದ ಹೋರಾಟಕ್ಕೆ ಕೈಹಾಕಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹಾಲುಮತದ ಕುರಿಗಳನ್ನು ಮೇಕೆಗಳು ಇಷ್ಟು ದಿನ ದಾರಿ ತಪ್ಪಿಸಿವೆ. ಈಗ ಹಾದಿ ತಪ್ಪಿಸುವ ಅವಶ್ಯಕತೆ ಇಲ್ಲ. ಹಿಂದೆ-ಮುಂದೆ ಶ್ರೀಮಠದ ಸ್ವಾಮೀಜಿಗಳು ಇರ್ತಾರೆ ಎಂದರು. ಸಮುದಾಯಕ್ಕೆ ಏನಾದರೂ ಮಾಡಬೇಕು ಎಂಬ ಯೋಚನೆ ಎಲ್ಲ ಸ್ವಾಮೀಜಿಗಳಿಗಿದೆ. ಸಮುದಾಯದ ಋಣ ತೀರಿಸುವ ಅವಕಾಶ ಸಿಕ್ಕಿದೆ. ಹೀಗಾಗಿ, ಪಾದಯಾತ್ರೆಯಲ್ಲಿ ನಾವೂ 21ದಿನ ಹೆಜ್ಜೆ ಹಾಕ್ತಿವಿ ಎಂದು ಹೇಳಿದರು.
Related Articles
Advertisement
ಸಾಣೇಹಳ್ಳಿಯ ಈಶ್ವರಾನಂದಶ್ರೀ, ಸಚಿವರಾದ ಎಂಟಿಬಿ ನಾಗರಾಜ್, ಆರ್. ಶಂಕರ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್, ಪಾದಯಾತ್ರೆ ಸಮಿತಿ ಖಜಾಂಚಿ ಕೆ.ಇ.ಕಾಂತೇಶ್, ಬಳ್ಳಾರಿ ಜಿಲ್ಲೆ ಮೈಲಾರದ ಗೊರವಯ್ಯ ರಾಮಣ್ಣ, ಪ್ರದೇಶ ಕುರುಬ ಸಂಘದ ಸಂಚಾಲಕ ಶಾಂತಪ್ಪ, ಕನಕ ಗುರುಪೀಠದ ಮಾಜಿ ಆಡಳಿತಾ ಧಿಕಾರಿ ಎಸ್‌ಎಫ್ ಎನ್ ಗಾಜೀಗೌಡ್ರ, ಶಂಕ್ರಣ್ಣ ಮಾತನವರ, ರಾಜೇಂದ್ರ ಹಾವೇರಣ್ಣನವರ ಇನ್ನಿತರರು ಉಪಸ್ಥಿತರಿದ್ದರು.