Advertisement

Nipah Virus: ಕೇರಳದಲ್ಲಿ ಐದನೇ ಪ್ರಕರಣ ಪತ್ತೆ… ಶಾಲಾ ಕಾಲೇಜುಗಳಿಗೆ ರಜೆ

12:07 PM Sep 14, 2023 | Team Udayavani |

ಕೇರಳ: ಕೇರಳದಲ್ಲಿ ನಿಪಾ ಹಾವಳಿ ಹೆಚ್ಚಾಗುತ್ತಿದ್ದು ಇದೀಗ ಒಂಬತ್ತು ವರ್ಷದ ಬಾಲಕನಲ್ಲೂ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಕೋಝಿಕೋಡ್‌ನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

Advertisement

ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎ ಗೀತಾ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ರಜೆ ಘೋಷಿಸಿದ್ದು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಿದ ಅವರು ವಿಶ್ವವಿದ್ಯಾನಿಲಯದ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಹೇಳಿದರು.

ಬುಧವಾರ ಕೇರಳದಲ್ಲಿ ಐದನೇ ಪ್ರಕರಣ ಬೆಳಕಿಗೆ ಬಂದಿದ್ದು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸರಕಾರ ಸೂಚಿಸಿದೆ.

ಕೋಝಿಕ್ಕೋಡ್‌ನಲ್ಲಿ ನಿಪಾಹ್ ಹರಡಿದ ಹಿನ್ನೆಲೆಯಲ್ಲಿ ನೆರೆಯ ಜಿಲ್ಲೆಯ ವಯನಾಡಿನಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

ವಯನಾಡ್ ಜಿಲ್ಲಾಡಳಿತವು ನಿಪಾ ಪ್ರಕರಣದ ನಿಯಂತ್ರಣಕ್ಕೆ 15 ಕೋರ್ ಕಮಿಟಿಗಳನ್ನು ಸಹ ರಚಿಸಿದ್ದು ರಾಜ್ಯದಲ್ಲಿ ಕಂಡುಬರುವ ವೈರಸ್ ಸ್ಟ್ರೈನ್ ಬಾಂಗ್ಲಾದೇಶದ ರೂಪಾಂತರವಾಗಿದ್ದು ಅದು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ ಮತ್ತು ಮಾರಕವಾಗಿದೆ ಎಂದು ಸರ್ಕಾರ ಹೇಳಿದೆ.

Advertisement

ಈಗಾಗಲೇ ಸೋಂಕಿತರ ಸಂಪರ್ಕದಲ್ಲಿರುವ ಎಲ್ಲಾ 76 ಜನರ ಸ್ಥಿತಿ ಸ್ಥಿರವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.

ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಇತರ 13 ಜನರನ್ನು ಈಗ ಆಸ್ಪತ್ರೆಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಸೋಂಕಿತರಲ್ಲಿ 9 ವರ್ಷದ ಮಗು ಮಾತ್ರ – ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: Army:ಪತಿಯ ಸಾವಿನ ವಿಷಯ ಪತ್ನಿಗೆ ತಿಳಿದಿಲ್ಲ: ಹುತಾತ್ಮ ಕರ್ನಲ್‌ ಸಿಂಗ್ ಸಹೋದರ ಗಿಲ್‌ ನುಡಿ…

Advertisement

Udayavani is now on Telegram. Click here to join our channel and stay updated with the latest news.

Next