Advertisement
ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡದ ಜಿಲ್ಲೆಗಳ ವ್ಯಾಪ್ತಿಯಲ್ಲಿ “ಜ್ವರ ಕೇಂದ್ರ’ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ದೃಢಪಡುವ ಶಂಕಿತ ನಿಫಾ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಕಾಲ ಕಾಲಕ್ಕೆ ಒದಗಿಸುವಂತೆಯೂ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ| ರಣದೀಪ್ ಹೇಳಿದ್ದಾರೆ. ವೈರಾಣು ಸೋಂಕು ವರದಿಯಾದ ಸ್ಥಳಕ್ಕೆ ಭೇಟಿ ನೀಡಿದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೇರಳದ ಜತೆಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡದ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಸೋಂಕುಪೀಡಿತರ ಚಿಕಿತ್ಸೆಗೆ 2 ಹಾಸಿಗೆ ಹಾಗೂ ಐಸಿಯು ಜತೆಗೆ ಶಂಕಿತ ವ್ಯಕ್ತಿಗಳ ಕ್ವಾರಂಟೈನ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
Related Articles
Advertisement
ಆರಕ್ಕೆ ಏರಿಕೆನಿಫಾ ಕಾಣಿಸಿಕೊಂಡಿರುವ ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಮತ್ತೂಬ್ಬರಿಗೆ ಸೋಂಕು ತಗುಲಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಆರಕ್ಕೆ ಏರಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಅವಧಿಯಲ್ಲಿದ್ದ ಕಠಿನ ನಿಯಮಗಳು ಜಾರಿಯಾಗಿವೆ. ರಾಜಸ್ಥಾನದಲ್ಲಿಯೂ ನಿಫಾ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಪ್ರತಿಕಾಯ
ನಿಫಾ ಸೋಂಕಿನ ಚಿಕಿತ್ಸೆಗಾಗಿ ಅಗತ್ಯ ಇರುವ ಮೊನೊಕ್ಲೋನಲ್ ಪ್ರತಿಕಾಯವನ್ನು ಆಸ್ಟ್ರೇಲಿಯಾದಿಂದ ತರಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ರಾಜೀವ್ ಭಾಲ್ ಹೇಳಿದ್ದಾರೆ. 2018ರಲ್ಲಿಯೂ ಅದನ್ನು ತರಿಸಿಕೊಳ್ಳಲಾಗಿತ್ತು. ಆದರೆ ಅದನ್ನು ದೇಶದಲ್ಲಿ ಇದುವರೆಗೆ ಯಾರಿಗೂ ನೀಡಲಾಗಿಲ್ಲ ಎಂದಿದ್ದಾರೆ.