Advertisement

ಉತ್ತಮ ಭವಿಷ್ಯಕ್ಕಾಗಿ ಎನ್‌ಇಪಿ: ಪ್ರಧಾನಿ ಮೋದಿ

12:37 AM Dec 25, 2022 | Team Udayavani |

ರಾಜ್‌ಕೋಟ್‌: ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಭವಿಷ್ಯದ ದಿನಗಳನ್ನು ಮುಂದಿಟ್ಟುಕೊಂಡು ರಚಿಸಲಾಗಿದೆ. ಆದರೆ ಹಿಂದಿನ ಸರಕಾರಗಳು ಈ ನಿಟ್ಟಿನಲ್ಲಿ ಗಮನ ಹರಿಸಿಯೇ ಇರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ರಾಜ್‌ಕೋಟ್‌ನ ಶ್ರೀ ಸ್ವಾಮಿ ನಾರಾಯಣ ಗುರುಕುಲದ 75 ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಅವರು ಮಾತನಾಡಿದರು. 2014ರ ಬಳಿಕ ದೇಶ ದಲ್ಲಿ ಐಐಟಿ, ಐಐಎಂಗಳು, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ.

ನಮ್ಮ ದೇಶದಲ್ಲಿ ಪ್ರಾಚೀನವಾಗಿ ಅಸ್ತಿತ್ವದಲ್ಲಿ ಇದ್ದ ಗುರುಕಲ ವ್ಯವಸ್ಥೆ ಉತ್ತಮವಾಗಿತ್ತು. ಜೀವನದ ಪರಮ ಉದ್ದೇಶವೇ ಜ್ಞಾನಾರ್ಜನೆಯಾಗಿತ್ತು. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಂತರು ಮತ್ತು ಧಾರ್ಮಿಕ ನಾಯಕರು ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಅದನ್ನು ಪುನರುಜ್ಜೀವನಗೊಳಿಸಲೂ ನೆರವಾಗಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next