Advertisement

ದೂರ ಶಿಕ್ಷಣ ಪರೀಕ್ಷೆಗೆ ಆಧಾರ್‌ ಕಡ್ಡಾಯ

07:35 AM Aug 23, 2017 | Team Udayavani |

ನವದೆಹಲಿ: ದೂರ ಶಿಕ್ಷಣ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಇನ್ನು ಮುಂದೆ ಅಧಾರ್‌ ಕಾರ್ಡ್‌ ಹಾಜರುಪಡಿಸುವುದು ಕಡ್ಡಾಯವಾಗಿದೆ. ಪರೀಕ್ಷೆಯಲ್ಲಿ ಅಭ್ಯರ್ಥಿ ಪರವಾಗಿ ಮತ್ತೂಬ್ಬರು ಬರೆಯುವುದನ್ನು ತಡೆಗಟ್ಟಲು ರಾಷ್ಟ್ರೀಯ ದೂರ ಶಿಕ್ಷಣ ಸಂಸ್ಥೆ (ಎನ್‌ಐಒಎಸ್‌) ಈ ಕ್ರಮ ಕೈಗೊಂಡಿದೆ.

Advertisement

ಜೊತೆಗೆ ಪರೀಕ್ಷಾ ಕೇಂದ್ರದಲ್ಲಿ ಸ್ಕ್ಯಾನರ್‌ ಮಷಿನ್‌ಗಳನ್ನು ಅಳವಡಿಸಲಾಗುತ್ತದೆ. ಇದರಲ್ಲಿ ಅಭ್ಯರ್ಥಿಯ ಹೆಬ್ಬೆರಳ ಗುರುತು ಹೋಲಿಕೆಯಾದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಕಳೆದ ಮಾರ್ಚ್‌ನಲ್ಲಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಕ್ರಮ ತಡೆಗೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next