Advertisement

ತಿರುಚಿನಾಪಳ್ಳಿ ಸಮೀಪ ಭೀಕರ ರಸ್ತೆ ಅಪಘಾತಕ್ಕೆ 9 ಮಂದಿ ಬಲಿ

11:01 AM Dec 07, 2017 | Team Udayavani |

ತಿರುಚಿನಾಪಳ್ಳಿ, ತಮಿಳುನಾಡು : ಇಲ್ಲಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ತಿರುವಂಕುರಿಚ್ಚಿ ಎಂಬಲ್ಲಿ ವ್ಯಾನೊಂದು ರಸ್ತೆ ಬದಿ ನಿಂತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ಅಸುನೀಗಿದ್ದಾರೆ.

Advertisement

ವ್ಯಾನಿನಲ್ಲಿದ್ದವು ಕನ್ಯಾಕುಮಾರಿಯಿಂದ ತಿರುಚಿನಾಪಳ್ಳಿ ಮಾರ್ಗವಾಗಿ ತಿರುಪತಿಗೆ ಹೋಗುತ್ತಿದ್ದರು. ಈ ಭೀಕರ ಅಪಘಾತ ನಿನ್ನೆ ಬುಧವಾರ ರಾತ್ರಿ ಸಂಭವಿಸಿತೆಂದು ಪೊಲೀಸರು ತಿಳಿಸಿದ್ದಾರೆ.

ಈ ಅವಘಡದಲ್ಲಿ ಗಾಯಾಳುಗಳಾದ ನಾಲ್ಕು ಮಂದಿಯನ್ನು ಇಲ್ಲಿನ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next