Advertisement
ಆಪರೇಷನ್ ಕಮಲ ಕಾರ್ಯಾಚರಣೆ ವಿಫಲವಾದ ಆಡಿಯೋ “ಬಾಂಬ್’ ರೂವಾರಿ ನಾಗನಗೌಡ ಕುಂದಕೂರು ಅವರಿಗೆ ನಿಗಮ ಮಂಡಳಿ ಕೊಡುಗೆ ನೀಡಲಾಗಿದೆ. ಒಂಭತ್ತು ನೇಮಕಾತಿಗಳ ಪೈಕಿ ಎಂಟು ಹಾಲಿ ಶಾಸಕರಿಗೆ ಒಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಅವರಿಗೆ ನೀಡಲಾಗಿದೆ. ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲಾಗಿದೆ. ಸಂಸದೀಯ ಕಾರ್ಯದರ್ಶಿಗಳಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ. ಕಾಂಗ್ರೆಸ್‌ನ ಇಬ್ಬರು ಶಾಸಕರಿಗೂನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಿರೋಧದಿಂದ ಕೆಆರ್‌ಡಿಎಲ್ ಅಧ್ಯಕ್ಷಗಿರಿ ತಪ್ಪಿಸಿಕೊಂಡಿದ್ದ ಕಾಂಗ್ರೆಸ್‌ನ ವೆಂಕಟರಮಣಯ್ಯ ಅವರನ್ನು ಅರಣ್ಯ ಕೈಗಾರಿಕೆ ನಿಗಮ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮತ್ತೂಬ್ಬ ಶಾಸಕ ಎಸ್.ಭೀಮಾ ನಾಯಕ್ ಅವರನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರಿಗೆ ಈ ಬಾರಿಯೂ ನಿರಾಸೆಯಾಗಿದೆ. ಯಾರ್ಯಾರಿಗೆ ಏನು?
Related Articles
Advertisement
ಶಿವಲಿಂಗೇಗೌಡ- ಕರ್ನಾಟಕ ಗೃಹ ಮಂಡಳಿ
ಕೆ.ಮಹದೇವ್- ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ದಿ ನಿಗಮ
ಡಿ.ಸಿ.ಗೌರಿ ಶಂಕರ್- ಎಂಎಸ್‌ಐಎಲ್
ಡಾ.ಕೆ.ಅನ್ನದಾನಿ- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ
ನಾಗನಗೌಡ ಕಂದಕೂರು-ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ರಾಜಾ ವೆಂಕಟಪ್ಪ ನಾಯಕ- ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ
ಜಫ್ರುಲ್ಲಾ ಖಾನ್- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ನಿಸರ್ಗ ನಾರಾಯಣಸ್ವಾಮಿ- ಬೆಂಗಳೂರು ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಸಂಸದೀಯ ಕಾರ್ಯದರ್ಶಿಗಳುದೇವಾನಂದ್ ಪೂಲಸಿಂಗ್ ಚವ್ಹಾಣ್ ಅವರಿಗೆ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ನಿಯೋಜಿಸಲಾಗಿದೆ. ಡಾ.ಕೆ.ಶ್ರೀನಿವಾಸಮೂರ್ತಿ (ಪಶು ಸಂಗೋಪನೆ ಮತ್ತು ಮೀನುಗಾರಿಕೆ)
ಎಂ.ಶ್ರೀನಿವಾಸ್ (ಸಹಕಾರ)
ತಿಪ್ಪೇಸ್ವಾಮಿ (ಲೋಕೋಪಯೋಗಿ )