Advertisement

ಮುಂಬೈ, ಕೊಲ್ಲಾಪುರ, ಜಾರ್ಖಂಡ ಕಂಟಕದಿಂದ ಬೆಳಗಾವಿಯ 9 ಮಂದಿ ಪಾಸಿಟಿವ್

02:03 PM May 21, 2020 | keerthan |

ಬೆಳಗಾವಿ: ಎರಡು ದಿನಗಳಿಂದ ಒಂದೇ ಒಂದು ಸೋಂಕು ದೃಢವಾಗದ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಹೊಸ ಒಂಬತ್ತು ಮಂದಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ.

Advertisement

ಕೊಲ್ಲಾಪುರ, ಅಜ್ಮೇರ, ಮುಂಬೈ ಹಾಗೂ ಜಾರ್ಖಂಡ ಪ್ರವಾಸ ಹಿನ್ನೆಲೆ ಹೊಂದಿದವರಿಗೆ ಸೋಂಕು ತಗುಲಿರುವುದು ಮತ್ತಷ್ಟು ಆತಂಕಕ್ಕೆ‌ ಕಾರಣವಾಗಿದೆ.

ಜಿಲ್ಲೆಯಲ್ಲಿ ಈ ಒಂಬತ್ತು ಹೊಸ ಪ್ರಕರಣದಿಂದಾಗಿ ಒಟ್ಟು 127 ಜನರಿಗೆ ಸೋಂಕು ತಗುಲಿದಂತಾಗಿದೆ. ಜಾರ್ಖಂಡ್ ಶಿಖರಜಿಗೆ ಹೋಗಿದ್ದ 65 ವರ್ಷದ ಮಹಿಳೆ, 63 ವರ್ಷದ ಮಹಿಳೆ, 24 ವರ್ಷದ ವ್ಯಕ್ತಿ, 25 ವರ್ಷದ ಪುರುಷ, 75 ವರ್ಷದ ವೃದ್ಧ, ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹೋಗಿ ಬಂದಿದ್ದ 27 ವರ್ಷದ ಪುರುಷ, 07 ವರ್ಷದ ಬಾಲಕಿ, ಮುಂಬೈನಿಂದ ಬಂದ 29 ವರ್ಷದ ಮಹಿಳೆ ಹಾಗೂ ಪಿ- 721 ಸೋಂಕಿತ ವ್ಯಕ್ತಿ ಸಂಪರ್ಕದಿಂದಾಗಿ 43 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ತಗುಲಿದೆ.

ರಾಜ್ಯದಲ್ಲಿ ಇಂದು ಒಟ್ಟು 116 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1578ಕ್ಕೆ ಏರಿದೆ. ಇದರಲ್ಲಿ 41 ಜನರು ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಓರ್ವ ಸೋಂಕಿತ ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾನೆ

Advertisement

Udayavani is now on Telegram. Click here to join our channel and stay updated with the latest news.

Next