Advertisement

ಕೇಜ್ರಿ ಸರಕಾರದ 9 ಸಲಹೆಗಾರರ ವಜಾ

10:35 AM Apr 18, 2018 | Karthik A |

ಹೊಸದಿಲ್ಲಿ: ದಿಲ್ಲಿ ಸರಕಾರದ ಒಂಭತ್ತು ಸಲಹೆಗಾರರ ನೇಮಕಾತಿಯನ್ನು ಕೇಂದ್ರ ಗೃಹ ಇಲಾಖೆ ಮಂಗಳವಾರ ರದ್ದುಗೊಳಿಸಿದೆ. ಒಪ್ಪಿಗೆ ಪಡೆಯದೇ ಈ ನೇಮಕಾತಿ ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

Advertisement

ಕೆಲಸದಿಂದ ವಜಾಗೊಂಡವರಲ್ಲಿ ಆಮ್‌ ಆದ್ಮಿ ಪಾರ್ಟಿಯ ವಕ್ತಾರ ಅರುಣ್‌ ಚಾಧಾ ಅವರ ಹೆಸರಿದ್ದು, ಇವರು ಈವರೆಗೆ ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರೇ ನಿಭಾಯಿಸುತ್ತಿರುವ ಹಣಕಾಸು ಇಲಾಖೆಯ ಸಲಹೆಗಾರರಾಗಿದ್ದರು. ಕೇಂದ್ರ ಸರಕಾರ ವಜಾಗೊಳಿಸಿರುವುದಕ್ಕೆ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಚಾಧಾ, 2016ರ ರಾಜ್ಯ ಬಜೆಟ್‌ ಸಮಯದಲ್ಲಿ ತಮ್ಮನ್ನು ಹಣಕಾಸು ಇಲಾಖೆಯ ಸಲಹೆಗಾರರನ್ನಾಗಿ 2 ತಿಂಗಳ ಕಾಲಾವಧಿಗೆ ನೇಮಿಸಿಕೊಳ್ಳಲಾಗಿತ್ತು. ತಿಂಗಳಿಗೆ ಕೇವಲ 1 ರೂ. ವೇತನದ ಲೆಕ್ಕದಲ್ಲಿ ತಾವು ಕೆಲಸಕ್ಕೆ ಸೇರಿದ್ದಾಗಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next