Advertisement

ನಿಮ್ಹಾನ್ಸ್ ಆಸ್ಪತ್ರೆಯ ಎದುರು ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

04:55 PM Jul 20, 2020 | keerthan |

ಬೆಂಗಳೂರು: ಕೋವಿಡ್ ಪಾಸಿಟಿವ್ ಆದ ಗುತ್ತಿಗೆ ಕಾರ್ಮಿಕರಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಾಗಲಿ ಅಥವಾ ಸಾಂಸ್ಥಿಕ ಕ್ವಾರಂಟೈನ್ ಸೌಲಭ್ಯತೆಯಾಗಲಿ ನೀಡದೆ ಅವರನ್ನು ಮನೆಗೆ ಕಳುಹಿಸಲಾಗುತ್ತಿದೆ. ನಿಮ್ಹಾನ್ಸ್ ಒಂದು ಕೋವಿಡ್ ಚಿಕಿತ್ಸೆ ಆಸ್ಪತ್ರೆಯಾಗಿ ಸರಕಾರವು ಗುರುತಿಸಿದ್ದು, ಇದೇ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಗುತ್ತಿಗೆ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು.

Advertisement

ಈ ಕಾರ್ಮಿಕರು ಚಿಕ್ಕ ಮನೆಗಳಲ್ಲಿ ವಾಸವಾಗಿದ್ದು, ಮನೆಯಲ್ಲಿ ಕ್ವಾರಂಟೈನ್ ಆಗಲು ಸಾಧ್ಯವಿಲ್ಲ. ಆಸ್ಪತ್ರೆಯ ಖಾಯಂ ನೌಕರರುಗಳಿಗೆ ಎಲ್ಲಾ ಸೌಲಭ್ಯತೆಗಳನ್ನು ನೀಡಲಾಗುತ್ತದೆ. ಆದರೆ ಗುತ್ತಿಗೆ ಕಾರ್ಮಿಕರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ನೂರಾರು ಗುತ್ತಿಗೆ ಕಾರ್ಮಿಕರು ನಿಮ್ಹಾನ್ಸ್ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ದಾಖಲಿಸುವುದು, ಸರಿಯಾದ ಚಿಕಿತ್ಸೆ, ಸುರಕ್ಷಾ ಕವಚಗಳು, ಪಿಪಿಇ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ ಪ್ಯಾಕೇಜ್ ಅಡಿಯಲ್ಲಿ 50 ಲಕ್ಷ ರೂ. ವಿಮೆ, ಕೋವಿಡ್ ಕೆಲಸದ ನಂತರ ಬಟ್ಟೆ ಬದಲಾಯಿಸಲು ಮತ್ತು ಸ್ನಾನ ಮಾಡಲು ಕೊಠಡಿ, ಲಾಕ್ ಡೌನ್ ಸಮಯದ ವೇತನ ಮತ್ತು ಕೋವಿಡ್ ಕೆಲಸದ ಮಾಡುತ್ತಿರುವ ಕಾರಣ ಒಂದು ತಿಂಗಳಷ್ಟು ವಿಶೇಷ ವೇತನವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಬೇಡಿಕೆಗಳನ್ನು ಇಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next