Advertisement

ಇಎಸ್‌ಐಯಲ್ಲಿ ನಿಮ್ಹಾನ್ಸ್‌ ಶಾಖೆ: ಡಾ|ಜಾಧವ

08:04 AM Jun 24, 2020 | Suhan S |

ಕಲಬುರಗಿ: ಇಲ್ಲಿನ ಇಎಸ್‌ಐ (ವೈದ್ಯಕೀಯ ಕಾಲೇಜು)ದಲ್ಲಿ ನಿಮ್ಹಾನ್ಸ್‌ ಶಾಖೆ ಪ್ರಾರಂಭಿಸುವ ನಿಟ್ಟಿನಲ್ಲಿ ನಿರ್ದೇಶಕ ಡಾ| ಬಿ.ಎನ್‌. ಗಂಗಾಧರ ಅವರನ್ನು ಸಂಸದ ಡಾ| ಉಮೇಶ ಜಾಧವ ಮಂಗಳವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿದರು.

Advertisement

ಸುಸಜ್ಜಿತ ಕಲಬುರಗಿಯ ಇಎಸ್‌ಐ ವೈದ್ಯಕೀಯ ಕಾಲೇಜಿನ ಯಾವ ಕಟ್ಟಡದಲ್ಲಿ ಶಾಖೆ ಪ್ರಾರಂಭಿಸುವ ಜತೆಗೆ ಅಗತ್ಯ ಅನುದಾನ ಒದಗಿಸುವ ಕುರಿತಾಗಿ ಸಂಸದರು ನಿಮ್ಹಾನ್ಸ್‌ ನಿರ್ದೇಶಕರೊಂದಿಗೆ ಸುದೀರ್ಘ‌ವಾಗಿ ಮಾತುಕತೆ ನಡೆಸಿದರು. ಇಎಸ್‌ಐಯಲ್ಲಿ ನಿಮ್ಹಾನ್ಸ್‌ ಶಾಖೆಯಾದರೆ ಮಾನಸಿಕ ರೋಗಿಗಳು ಹಾಗೂ ಮೆದುಳು ಜ್ವರದ ರೋಗಿಗಳು ದೂರದ ಬೆಂಗಳೂರಿಗೆ ಬರುವುದು ತಪ್ಪುತ್ತದೆ. ಮೆದುಳು ಜ್ವರಕ್ಕೆ ತುರ್ತಾಗಿ ಚಿಕಿತ್ಸೆ ದೊರಕಬೇಕಾಗುತ್ತದೆ. ಹೀಗಾಗಿ ಶಾಖೆಯಾದಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಸಂಸದರು ನಿರ್ದೇಕರ ಗಮನಕ್ಕೆ ತಂದರು.

ನಿಮ್ಹಾನ್ಸ್‌ ನಿರ್ದೇಶಕ ಡಾ| ಬಿ.ಎನ್‌. ಗಂಗಾಧರ ಅವರು ಕಲಬುರಗಿಯ ಇಎಸ್‌ಐಯಲ್ಲಿ ನಿಮಾನ್ಸ್‌ ಶಾಖೆ ಪ್ರಾರಂಭ ಮಾಡಲು ಬೇಕಾಗಿರುವ ಎಲ್ಲ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮುಖ್ಯವಾಗಿ ಕಟ್ಟಡವನ್ನು ಗುರುತಿಸಲಾಗಿದೆ. ಜತೆಗೆ ತಾಂತ್ರಿಕ ಬದಲಾವಣೆ ಬಗ್ಗೆಯೂ ಸಮಾಲೋಚಿಸಲಾಗಿದೆ. ಸಿಬ್ಬಂದಿ ನಿಯೋಜನೆಯೂ ಅಂತಿಮ ಹಂತದಲ್ಲಿದೆ. ಒಟ್ಟಾರೆ ಶೀಘ್ರದಲ್ಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಮನ್ವಯ ಹೊಂದಿ ಕಾರ್ಯಾರಂಭಕ್ಕೆ ಮುಂದಾಗಲಾಗುವುದು ಎಂದರು. ಎಲ್ಲೂ ಅಡೆತಡೆಯಾಗದು: ಕಲಬುರಗಿ ಇಎಸ್‌ಐಯಲ್ಲಿ ನಿಮ್ಹಾನ್ಸ್‌ ಶಾಖೆ ಆರಂಭವಾಗುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಳಿ ಎಲ್ಲಾದರೂ ಸ್ವಲ್ಪ ತಡೆಯಾದರೂ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಂಸದ ಡಾ| ಉಮೇಶ ಜಾಧವ ನಿಮ್ಹಾನ್ಸ್‌ ನಿರ್ದೇಶಕರಿಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next