Advertisement

2024ರ ಅಮೆರಿಕ ಚುನಾವಣೆಗೆ ನಿಕ್ಕಿ ಹ್ಯಾಲೆ ಸ್ಪರ್ಧೆ

09:16 PM Feb 14, 2023 | Team Udayavani |

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷೀಯ ಸ್ಥಾನ ಸ್ಪರ್ಧೆಗೆ ಭಾರತ ಮೂಲದ ಪ್ರಖ್ಯಾತ ಅಮೆರಿಕನ್‌ ರಾಜಕಾರಣಿ ನಿಕ್ಕಿ ಹ್ಯಾಲೆ, ಸ್ಪರ್ಧಿಸುವರೇ ಎನ್ನುವ ಸಂಶಯಗಳಿಗೆ ತೆರೆ ಬಿದ್ದಿದೆ.

Advertisement

ಮಂಗಳವಾರ ನಿಕ್ಕಿ ಅಧಿಕೃತವಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ನಿಕ್ಕಿ, ರಿಪಬ್ಲಿಕನ್‌ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ನ ಮೊದಲ ಪ್ರತಿಸ್ಪರ್ಧಿಯಾಗಿದ್ದಾರೆ.

ವಿಡಿಯೋ ಮೂಲಕ ತಮ್ಮ ಸ್ಪರ್ಧೆ ಖಚಿತಪಡಿಸಿದ್ದು,”ಅಮೆರಿಕ ನಮ್ಮ ಹೆಮ್ಮೆ, ಈ ದೇಶದ ಗಡಿ, ಅರ್ಥಿಕತೆಯನ್ನು ಬಲಪಡಿಸಲು ಹೊಸ ಪೀಳಿಗೆ ಅಧಿಕಾರವಹಿಸಿಕೊಳ್ಳುವುದು ಅಗತ್ಯ ‘ಎಂದು ಹ್ಯಾಲೆ ಹೇಳಿದ್ದಾರೆ.

ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿದ್ದ, ದಕ್ಷಿಣ ಕರೋಲಿನಾದ 2 ಅವಧಿಯ ಗವರ್ನರ್‌ ಕೂಡ ಆಗಿದ್ದ ಹ್ಯಾಲೆ ಪ್ರಭಾವಿ ರಾಜಕಾರಣಿ. ಇನ್ನು ಭಾರತೀಯ ಮೂಲದ ಅಮೆರಿಕನ್‌ ಉದ್ಯಮಿಯಾಗಿರುವ ವಿವೇಕ್‌ ರಾಮಸ್ವಾಮಿ ಕೂಡ ಈ ಬಾರಿಯ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಗಳಿದ್ದು, ಶೀಘ್ರವೇ ಈ ಬಗ್ಗೆ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next