Advertisement

ನಿಖಿಲ್ ರಿಂದ ಭತ್ತ ನಾಟಿ, ಜೆಡಿಎಸ್‌ಗೆ ಸುಮಲತಾ ಮಾತಿನ ಛಾಟಿ

01:38 AM Mar 31, 2019 | Team Udayavani |

ರಾಜ್ಯದ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾದ ಮಂಡ್ಯದಲ್ಲಿ ಅಭ್ಯರ್ಥಿಗಳ ಪ್ರಚಾರ ಮುಗಿಲು ಮುಟ್ಟಿದ್ದು, ಮತದಾರರ ಮನ ಸೆಳೆಯಲು
ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಶನಿವಾರ ನಡೆದ ಪ್ರಮುಖ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ಝಲಕ್‌ ಇಲ್ಲಿದೆ.

Advertisement

ಸುಮಲತಾರಿಂದ ರೋಡ್‌ ಶೋ
ಕೀಲಾರ ಸೇರಿದಂತೆ ಮಂಡ್ಯ ತಾಲೂಕಿನ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ
ಶನಿವಾರ ಪಕ್ಷೇತರ ಅಭ್ಯರ್ಥಿ ಸುಮಲತಾ ರೋಡ್‌ ಶೋ ನಡೆಸಿ,
ಮತದಾರರ ಒಲವು ಗಳಿಸಲು ಯತ್ನಿಸಿದರು. ಪ್ರಚಾರದ ವೇಳೆ ಜಾನಪದ
ಕಲಾತಂಡದವರು ರಣಕಹಳೆ ಹಿಡಿದು ಊದುವ ಮೂಲಕ ಅವರ
ಚಿಹ್ನೆಯನ್ನು ಸಾಂಕೇತಿಕವಾಗಿ ಪ್ರದರ್ಶಿಸಿದರು. ಈ ವೇಳೆ, ಮಾತನಾಡಿ,
“ಅಂಬರೀಶ್‌ ಇಲ್ಲದೆ ನನ್ನೊಳಗೇ ನಾನು ಅನುಭವಿಸುತ್ತಿರುವ ನೋವನ್ನು
ಮರೆಯಲು ಜನರ ಮುಂದೆ ಬಂದಿದ್ದೇನೆ. ಮುಖ್ಯಮಂತ್ರಿ ಹುದ್ದೆಗೆ ಗೌರವ
ನೀಡದೆ, ಒಬ್ಬ ಮಹಿಳೆ ಎನ್ನುವುದನ್ನೂ ನೋಡದೆ ಸಿಎಂ ಹಾಗೂ ಸಚಿವರು
ನನ್ನ ಮುಖದಲ್ಲಿ ನೋವಿಲ್ಲ ಅಂತಾರೆ. ನನ್ನ ನೋವನ್ನು ಜನರೆದುರು
ಪ್ರದರ್ಶನಕ್ಕಿಡಲು ಮನಸ್ಸು ಒಪ್ಪುತ್ತಿಲ್ಲ. ನಾನು ಯಾರ ಮುಂದೆಯೂ ಕಣ್ಣೀರು ಹಾಕಲ್ಲ. ನನಗೆ ಜನರ ಪ್ರೀತಿ ಬೇಕು’ ಎಂದರು.

ಅಭಿಮಾನಿಯಿಂದ ಉರುಳು ಸೇವೆ
ಈ ಮಧ್ಯೆ, ಕೆ.ಆರ್‌.ನಗರದ ಆಂಜನೇಯ ಬಡಾವಣೆಯ ಬೆನಕ ಪ್ರಸಾದ್‌ (23) ಎಂಬುವರು ಸುಮಲತಾ ಗೆಲುವಿಗೆ ಪ್ರಾರ್ಥಿಸಿ, ಶನಿವಾರ 5 ಕಿ.ಮೀ.ಗಳಷ್ಟು ದೂರ ಉರುಳು ಸೇವೆ ನಡೆಸಿದರು. ಮುಂಜಾನೆ 4ಕ್ಕೆ
ಬಡಾವಣೆಯ ಹನುಮಂತನ ದೇವಾಲಯದಿಂದ ಆರಂಭಿಸಿ ಕಂಠೇನಹಳ್ಳಿ, ಮೂಡಲಕೊಪ್ಪಲು, ಹಳೆ ರೈಲು ನಿಲ್ದಾಣ ರಸ್ತೆಯ ಮೂಲಕ ಪಟ್ಟಣದ ಹೊರವಲಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಉರುಳು ಸೇವೆ ನಡೆಸಿದರು.

ರೈತ ಸಂಘದಿಂದ ಆನೆ ಬಲ
ಇದೇ ವೇಳೆ, ಪಾಂಡವಪುರದ ಟಿಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ರೈತಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅಭಿಷೇಕ್‌ ಅಂಬರೀಶ್‌, ರೈತಸಂಘದ ಕಾರ್ಯಕರ್ತರ ಬೆಂಬಲದಿಂದ ನಮಗೆ ಆನೆ ಬಲ ಬಂದಿದೆ ಎಂದು ಅಮ್ಮ ಹೇಳುತ್ತಿದ್ದರು. ಈಗ ದರ್ಶನ್‌ ಪುಟ್ಟಣ್ಣಯ್ಯನವರೂ ಪ್ರಚಾರದಲ್ಲಿ ತೊಡಗಿಕೊಂಡರೆ ಮತ್ತಷ್ಟು ಬಲ ಬಂದಂತಾಗುತ್ತದೆ ಎಂದರು.

ಸ್ವಾಭಿಮಾನ ಎತ್ತಿಹಿಡಿಯಲು ಸುಮಲತಾಗೆ ಬೆಂಬಲ ಈ ಮಧ್ಯೆ, ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸುಮಲತಾ ಪರ ಮತಯಾಚಿಸಿದರು. ಈ ಚುನಾವಣೆಯಲ್ಲಿ ಜಾತಿ ರಾಜಕಾರಣವನ್ನು ಕೊನೆಗಾಣಿಸುವ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮಂಡ್ಯದಂತಹ ಗಂಡುಮೆಟ್ಟಿದ ನಾಡಿನಲ್ಲಿ ಕಳೆದ ಮೂರು ದಶಕಗಳಿಂದ ಪಕ್ಷ ಹೋರಾಟ ನಡೆಸುತ್ತಿದೆ. ಪ್ರತಿ ಬಾರಿಯೂ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇವೆ. ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಸಂದರ್ಭ ಒದಗಿ ಬಂದಿದ್ದರಿಂದ ಪಕ್ಷ ಸುಮಲತಾ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದೆ ಎಂದರು.

Advertisement

ಎತ್ತಿನಗಾಡಿಯಲ್ಲಿ ನಿಖಿಲ್ ಪ್ರಚಾರ
ಈ ಮಧ್ಯೆ, ಕೆಸ್ತೂರು ಸೇರಿದಂತೆ ಮದ್ದೂರು ತಾಲೂಕಿನ ವಿವಿಧೆಡೆ ನಿಖೀಲ್‌ ಕುಮಾರಸ್ವಾಮಿಯವರು ಎತ್ತಿನಗಾಡಿಯಲ್ಲಿ ತೆರಳಿ, ಮತದಾರರನ್ನು ಭೇಟಿ ಮಾಡಿದರು. ಮಹಿಳೆಯರು ಬೆಲ್ಲದಾರತಿ ಮಾಡಿ, ಪಟಾಕಿ ಸಿಡಿಸಿ, ಆತ್ಮೀಯತೆ ತೋರಿದರು. ತಾಲೂಕಿನ ಆತಗೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಕೆರೆ ಪಕ್ಕದ ರಸ್ತೆಯಲ್ಲಿ ಮಹಿಳೆಯರು ಭತ್ತ ನಾಟಿ ಮಾಡುತ್ತಿರುವುದನ್ನು ಕಂಡು ಕಾರಿನಿಂದ ಕೆಳಗಿಳಿದರು. ಕಾರ್ಯಕರ್ತರೊಂದಿಗೆ ಕೆಸರು ಗದ್ದೆಗಿಳಿದ ನಿಖಿಲ್, ಭತ್ತ ನಾಟಿ ಮಾಡುವ ಮೂಲಕ ತಾನು ಮಂಡ್ಯದ ಮಗನೆಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದರು. ಇದೇ ವೇಳೆ, ಕೆಸ್ತೂರು ಗ್ರಾಮದಲ್ಲಿ ಅಜ್ಜಿಯೊಬ್ಬಳು ನಿಖೀಲ್‌ ಕೆನ್ನೆಗೆ ಮುತ್ತಿಕ್ಕಿ, ತಲೆ ಮೇಲೆ ಕೈಯಿಟ್ಟು, ಗೆದ್ದು ಬರುವಂತೆ ಆಶೀರ್ವದಿಸಿದರು. ತಾಲೂಕಿನ ದುಂಡನಹಳ್ಳಿ ಹಾಗೂ ತೊರೆಶೆಟ್ಟಹಳ್ಳಿ ಗ್ರಾಮಗಳ ಮಹಿಳೆಯರು, ಕಳೆದ 30 ವರ್ಷಗಳಿಂದ ಮನೆಗಳ ಹಕ್ಕುಪತ್ರ ನೀಡಿಲ್ಲ. ನಮ್ಮ ಸಮಸ್ಯೆ ಬಗೆಹರಿಸಿ, ಮತ ಕೇಳಿ ಎಂದು ನಿಖಿಲ್ ರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಮಂಡ್ಯ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ ಎಂಬುದು ಮತ್ತೂಮ್ಮೆ ಸಾಬೀತಾಗುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಠೆà ಸತ್ಯ.
ಸಿ.ಎಸ್‌.ಪುಟ್ಟರಾಜು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ.

ಎಳನೀರು ಮಾರುಕಟ್ಟೆಯಲ್ಲಿರುವ ಬಹುತೇಕ ವರ್ತಕರು ರೈತರನ್ನು ವಂಚಿಸಿ ಹಣ ಮಾಡಿಕೊಂಡು, ಮೋಜು-ಮಸ್ತಿ ಮಾಡ್ತಿದ್ದಾರೆ. ಇಂತಹವರು ನನ್ನ ವಿರುದ್ಧ ಟೀಕೆಗೆ ನಿಂತಿದ್ದಾರೆ. ಇವರು ಅಪ್ಪನಿಗೆ ಹುಟ್ಟಿದ್ದರೆ ನನ್ನೆದುರು ನಿಂತು ಟೀಕೆ ಮಾಡಲಿ. – ಅಂಬರೀಶ್‌ ಅಭಿಮಾನಿಗಳ ವಿರುದ್ಧ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹರಿಹಾಯ್ದ ಪರಿಯಿದು.

ಮಂಡ್ಯ ಜಿಲ್ಲೆಯ ಜನರು ಹೊರಗಿನಿಂದ ಬಂದವರಿಗೆ ಇದುವರೆಗೆ ಮಣೆ ಹಾಕಿಲ್ಲ. ಈಗಲೂ ಮಣೆ ಹಾಕುವುದಿಲ್ಲ ಎಂಬ ನಂಬಿಕೆ
ನನ್ನದು.
ದೊಡ್ಡಣ್ಣ , ಚಿತ್ರನಟ.

ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಈವರೆಗೆ ಸ್ವತಂತ್ರ
ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಹಿಳೆಯನ್ನು ಜನ ಆಯ್ಕೆ ಮಾಡಿಲ್ಲ. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹಿಳೆಯನ್ನು
ಆಯ್ಕೆ ಮಾಡಿ, ಹೊಸ ಇತಿಹಾಸ ಸೃಷ್ಠಿಸಬೇಕು. ರಾಕ್‌ಲೈನ್‌ ವೆಂಕಟೇಶ್‌, ಚಿತ್ರ ನಿರ್ಮಾಪಕ.

ಎತ್ತಿನಗಾಡಿಯಲ್ಲಿ ನಿಖಿಲ್ ಪ್ರಚಾರ
ಈ ಮಧ್ಯೆ, ಕೆಸ್ತೂರು ಸೇರಿದಂತೆ ಮದ್ದೂರು ತಾಲೂಕಿನ ವಿವಿಧೆಡೆ ನಿಖಿಲ್ ಕುಮಾರಸ್ವಾಮಿಯವರು ಎತ್ತಿನಗಾಡಿಯಲ್ಲಿ ತೆರಳಿ, ಮತದಾರರನ್ನು ಭೇಟಿ ಮಾಡಿದರು. ಮಹಿಳೆಯರು ಬೆಲ್ಲದಾರತಿ ಮಾಡಿ, ಪಟಾಕಿ ಸಿಡಿಸಿ, ಆತ್ಮೀಯತೆ ತೋರಿದರು.

ತಾಲೂಕಿನ ಆತಗೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಕೆರೆ
ಪಕ್ಕದ ರಸ್ತೆಯಲ್ಲಿ ಮಹಿಳೆಯರು ಭತ್ತ ನಾಟಿ ಮಾಡುತ್ತಿರುವುದನ್ನು ಕಂಡು ಕಾರಿನಿಂದ ಕೆಳಗಿಳಿದರು. ಕಾರ್ಯಕರ್ತರೊಂದಿಗೆ ಕೆಸರು ಗದ್ದೆಗಿಳಿದ ನಿಖಿಲ್, ಭತ್ತ ನಾಟಿ ಮಾಡುವ ಮೂಲಕ ತಾನು ಮಂಡ್ಯದ ಮಗನೆಂದು
ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದರು. ಇದೇ ವೇಳೆ, ಕೆಸ್ತೂರು ಗ್ರಾಮದಲ್ಲಿ ಅಜ್ಜಿಯೊಬ್ಬಳು ನಿಖೀಲ್‌ ಕೆನ್ನೆಗೆ ಮುತ್ತಿಕ್ಕಿ, ತಲೆ
ಮೇಲೆ ಕೈಯಿಟ್ಟು, ಗೆದ್ದು ಬರುವಂತೆ ಆಶೀರ್ವದಿಸಿದರು. ತಾಲೂಕಿನ ದುಂಡನಹಳ್ಳಿ ಹಾಗೂ ತೊರೆಶೆಟ್ಟಹಳ್ಳಿ ಗ್ರಾಮಗಳ ಮಹಿಳೆಯರು, ಕಳೆದ 30 ವರ್ಷಗಳಿಂದ ಮನೆಗಳ ಹಕ್ಕುಪತ್ರ ನೀಡಿಲ್ಲ. ನಮ್ಮ ಸಮಸ್ಯೆ ಬಗೆಹರಿಸಿ, ಮತ ಕೇಳಿ ಎಂದು ನಿಖಿಲ್ ರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

 

Advertisement

Udayavani is now on Telegram. Click here to join our channel and stay updated with the latest news.

Next