ಮದ್ದೂರು : ಮಂಡ್ಯ ಲೋಕಸಭಾ ಕ್ಷೇತ್ರದ ರಣಕದಲ್ಲಿ ಚುನಾವಣಾ ಕಾವು ಕ್ಷಣದಿಂದ ಕ್ಷಣಕ್ಕೆ ಏರುತ್ತಿದ್ದು, ವಾಗ್ಸಮರವೂ ತೀವ್ರಗೊಂಡಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ವಿರುದ್ಧ ಕಿಡಿ ಕಾರಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ನಿಖಿಲ್, ಅಭಿಷೇಕ್ಗೆ ತಂದೆ, ತಾಯಿ ಸಂಸ್ಕೃತಿಯಿಂದ ಬೆಳೆಸಿಲ್ಲ. ಬೆಳೆಸಿದ್ದರೆ ಅವರು ಹಾಗೇ ಮಾತನಾಡುವುದಿಲ್ಲವಾಗಿತ್ತು ಎಂದರು.
ಅಭಿಷೇಕ್ಗೆ ಸರಿಯಾದ ಪೋಷಣೆ ಸಿಕ್ಕಿಲ್ಲ ಹೀಗಾಗಿ ಅವರು ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆತ್ಮೀಯನಾಗಿದ್ದ ಗೆಳೆಯನ ವಿರುದ್ಧವೇ ಕಿಡಿ ಕಾರಿದರು.
ಇದೇ ವೇಳೆ ಅಂಬರೀಶ್ ಅವರ ಹೆಸರು ಹೇಳಿ ಮತ ಕೇಳುವ ಪರಿಸ್ಥಿತಿ ನಮಗೆ ಬಂದಿಲ್ಲ ಎಂದು ನಿಖಿಲ್ ಹೇಳಿದರು.
ಕುಮಾರಸ್ವಾಮಿ ಟವೆಲ್ ಹಿಡಿದು ಅಳುತ್ತಾರೆ ಎಂದು ಅಭಿಷೇಕ್ ಕಿಡಿ ಕಾರಿದ್ದರು.