ಕನಕಪುರ: ಚರ್ಚೆಗೆ ಗ್ರಾಸವಾಗಿದ್ದ ಚೀಲೂರು ಗ್ರಾಮದ ಘಟನೆ ಸಂಬಂಧ ಸ್ಪಷ್ಟನೆ ನೀಡಲು ಬಂದಿದ್ದ ನಿಖಿಲ್ ಕುಮಾರ ಸ್ವಾಮಿಗೆ ಗ್ರಾಮದ ಜನರು ಭರ್ಜರಿ ಸ್ವಾಗತ ನೀಡಿದ್ದಾರೆ.
ತಾಲೂಕಿನ ಮರಳವಾಡಿ ಹೋಬಳಿಯ ಚೀಲೂರು ಗ್ರಾಮದಲ್ಲಿ ಮಾ.23ರ ಮಂಗಳವಾರ ನಡೆದ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಆಹ್ವಾನದ ಮೇರೆಗೆ ಬಂದಿದ್ದರು. ಈ ವೇಳೆ ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೆಂಡಾಮಂಡಲವಾಗಿದ್ದ ನಿಖಿಲ್ ಕುಮಾರಸ್ವಾಮಿ ನೀವು ಏನ್ ದಬ್ಬಾಕ್ಕಿದ್ದೀರಾ ಬಂದು ಹೇಳಿ ಎಂದು ಸವಾಲು ಹಾಕಿದರು. ಬಳಿಕ ಅಲ್ಲಿಂದ ನಿರ್ಗಮಿಸಿದರು.
ಈ ವಿಚಾರ ತಡವಾಗಿ ಬೆಳಕಿಗೆ ಬಂದುಚೆರ್ಚೆಗೆ ಗ್ರಾಸವಾಗಿ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿಸ್ಪಷ್ಟನೆ ನೀಡಲು ಭಾನುವಾರ ಚೀಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿಗೆ ಗ್ರಾಮದ ಮಹಿಳೆಯರುಆರತಿ ಎತ್ತಿ ಹಣೆಗೆ ತಿಲಕ ಇಟ್ಟುಬರಮಾಡಿಕೊಂಡರು. ಯುವ ಕಾರ್ಯಕರ್ತರು ಪಟಾಕಿ ಸಿಡಿಸಿ ನಿಖೀಲ್‌ಕುಮಾರ ಸ್ವಾಮಿ ಅವರನ್ನು ಹೆಗಲ ಮೇಲೆಹೊತ್ತು ಮೆರವಣಿಗೆ ಮಾಡಿ ಭರ್ಜರಿಯಾಗಿ ಸ್ವಾಗತ ಮಾಡಿದರು.
ದೇವರಿಗೆ ವಿಶೇಷವಾದ ಪೂಜೆ ಸಲ್ಲಿಸಿದ ಅವರು ನಂತರ ಮಾತನಾಡಿ, ಮೊನ್ನೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದರು. ನಾಟಕ ಪ್ರದರ್ಶನಕ್ಕೆ ಅತ್ಯಂತ ಪ್ರೀತಿಯಿಂದ ನೀವುನನ್ನನ್ನು ಬರ ಮಾಡಿಕೊಂಡಿದ್ರಿ. ನನ್ನಿಂದಲೇ ಗೊಂದಲ ಸೃಷ್ಟಿಯಾಯಿತು ಎಂಬ ನೋವು ಮನಸ್ಸಿನಲ್ಲಿ ಕಾಡುತ್ತಿತ್ತು. ಈ ವಿಚಾರದ ಬಗ್ಗೆಊರಿನ ಹಲವಾರು ಮುಖಂಡರಿಗೆ ಕರೆ ಮಾಡಿ ಸಲಹೆ ಪಡೆದುಕೊಂಡು ಮತ್ತೆ ಗ್ರಾಮಕ್ಕೆ ಭೇಟಿನೀಡಿ ಗೊಂದಲಕ್ಕೆ ತೆರೆ ಎಳೆಬೇಕು ಎಂದು ನಿರ್ಧಾರ ಮಾಡಿ ಬಂದಿದ್ದೇನೆ. ಮೊನ್ನೆ ನಡೆದಘಟನೆ ಮುಗಿದು ಹೋದ ಅಧ್ಯಾಯ ಅದನ್ನೇ ಮುಂದುವರಿಸೋದು ಬೇಡ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ.ದೇವೇಗೌಡರ ಕಾಲದಿಂದ ನೀವು ನಮ್ಮ ಪರ ನಿಂತಿದ್ದೀರಾ. ಕುಮಾರಣ್ಣ ಮೂಲತಃ ಹಾಸನದವರಾದ್ರೂ ರಾಜಕೀಯವಾಗಿ ರಾಮನಗರದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅದಕ್ಕೆಲ್ಲಾ ಕಾರಣಕರ್ತರು ನೀವು. ಈಗ ಬೇಸಿಗೆ ಆರಂಭವಾಗಿದೆಕುಡಿಯುವ ನೀರಿನ ಸಮಸ್ಯೆ ಬಗ್ಗೆಹರಿಸಲುಈಗಾಗಲೇ ಕೆಲವು ಟ್ಯಾಂಕರ್‌ಗಳನ್ನು ಖರೀದಿಮಾಡಿದ್ದೇನೆ. ಎಲ್ಲಿ ನೀರಿನ ಸಮಸ್ಯೆ ಇದೆ ಅಂಥ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರುಪೂರೈಸುವ ವ್ಯವಸ್ಥೆ ಮಾಡಿದ್ದೇವೆ. ಪ್ರತಿಪಂಚಾಯ್ತಿ ವ್ಯಾಪ್ತಿಯಲ್ಲಿ ಏನು ಸಮಸ್ಯೆ ಇದೆಅಂತಾ ಪಟ್ಟಿ ಮಾಡಿ ಕೊಡಲು ನಮ್ಮಕಾರ್ಯಕರ್ತರಿಗೆ ಹೇಳಿದ್ದೇನೆ. ನಿಮ್ಮ ಮನೆ ಮಗನ ಹಾಗೆ ನಿಮ್ಮ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಮತ್ತು ಹೊಣೆ ನನ್ನ ಮೇಲಿದೆ ಎಂದರು.
ಹಾರೋಹಳ್ಳಿ ಮತ್ತು ಮರಳವಾಡಿಹೋಬಳಿಯ ಜೆಡಿಎಸ್ ಮುಖಂಡರು ಕಾರ್ಯಕರ್ತರು ಚೀಲೂರು ಗ್ರಾಮಸ್ಥರು ಇದ್ದರು.