Advertisement

ಪಾಠ ಕಲಿಸಿದ ಚುನಾವಣೆ ಸೋಲು: ನಿಖಿಲ್‌

02:16 PM Dec 06, 2021 | Team Udayavani |

ಭಾರತೀನಗರ: ಕಳೆದ ಲೋಕಸಭಾ ಚುನಾವಣೆಯ ಸೋಲು ನನಗೆ ವೈಯುಕ್ತಿಕವಾಗಿ ಪಾಠ ಕಲಿಸಿದೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

Advertisement

ಭಾರತೀನಗರದಲ್ಲಿ ನಡೆದ ಜೆಡಿಎಸ್‌ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನನ್ನ ರಾಜಕೀಯ ಜೀವನ ಮಂಡ್ಯಜಿಲ್ಲೆಯಿಂದ ಆರಂಭವಾಗಿದ್ದು, ಯಾವುದೇ ಸಂದರ್ಭಬಂದರೂ ನಿಮ್ಮ ಜೊತೆಯೇ ಇರುತ್ತೇನೆ. ಸಾರ್ವಜನಿಕಬದುಕಿನಲ್ಲಿ ಇರುವುದೇ ನನ್ನ ಪುಣ್ಯ. ನನ್ನ ತಾತ, ತಂದೆ ಹೆಸರಿನಿಂದ ನಾನು ಯಾವತ್ತೋ ಶಾಸಕನಾಗಿರುತ್ತಿದ್ದೆ. ಜನರ ಮಧ್ಯೆಯಿದ್ದು ಹಿರಿಯರ ಜೊತೆಯಲ್ಲಿ ನನಗೂ ಕಲಿಯುವ ಅವಕಾಶ ಸಿಕ್ಕಿದೆ ಎಂದರು.

ಎಂಎಲ್‌ಎ ಆಗಲು ಇಚ್ಚಿಸಿದ್ದೆ : ಅಪ್ಪಾಜಿಗೌಡ ಜೆಡಿಎಸ್‌ ಅಭ್ಯರ್ಥಿ ಎನ್‌.ಅಪ್ಪಾಜೀಗೌಡ ಮಾತನಾಡಿ, ನಾನು ಈ ಬಾರಿ ವಿಧಾನ ಪರಿಷತ್‌ಗೆ ಸ್ಪರ್ಧೆ ಮಾಡುವುದಿಲ್ಲ.ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ವರಿಷ್ಠರಲ್ಲಿ ವಿನಂತಿಸಿಕೊಂಡಿದ್ದೆ. ಆದರೆ ವರಿಷ್ಠರುಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಪರಿಷತ್‌ಗೆ ಸ್ಪರ್ಧೆಮಾಡಿ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿಸ್ಪರ್ಧೆ ಮಾಡಿದ್ದೇನೆ. ವಿಳಾಸವಿಲ್ಲದೇ ಬರುವ ಹಲವುಮುಖಂಡರಿಗೆ ಜೆಡಿಎಸ್‌ ಅವರಿಗೆ ವಿಳಾಸ ನೀಡಿದೆ. ವಿಳಾಸ ಸಿಕ್ಕ ಮೇಲೆ ಬೇರೆಡೆ ಹಾರುತ್ತಾರೆ. ಎಷ್ಟೇ ನಾಯಕರು ಹೋಗಲಿ, ಜೆಡಿಎಸ್‌ ಗೆಲ್ಲಿಸುವ ಶಕ್ತಿ ಇರುವುದು ನಿಮಗೆ ಮಾತ್ರ ಎಂದರು.

ಇದೇ ವೇಳೆ ಶಾಸಕ ಡಿ.ಸಿ.ತಮ್ಮಣ್ಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ಮನ್‌ಮುಲ್‌ ಅಧ್ಯಕ್ಷರಾಮಚಂದ್ರ, ಮಧುರಮಣಿ ಅಪ್ಪಾಜಿಗೌಡ, ಮುಖಂಡರಾದ ಸಂತೋಷ್‌ ತಮ್ಮಣ್ಣ, ಮಾದನಾಯಕನಹಳ್ಳಿ ರಾಜಣ್ಣ, ಮರಿಮಾದೇಗೌಡ,ವೆಂಕಟೇಶ್‌, ನೆಲ್ಲಿಗೆರೆ ಬಾಲು, ಮಹಾಲಿಂಗೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next