Advertisement
ಈ ಕುರಿತಂತೆ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು ಅದರ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಮೂರು ವರ್ಷಗಳಿಂದ ನಿಖೀಲ್ ಅವರು ಅಸಭ್ಯ ಇ-ಮೇಲ್‌ಗಳನ್ನು ಕಳುಹಿಸುತ್ತಿದ್ದು, ನಮ್ಮ ಪ್ರಾಂತ್ಯದ ನಾಗರಿಕರಿರುವ ಸಾಮಾಜಿಕ ಜಾಲತಾಣಗಳ ಗ್ರೂಪ್‌ಗ್ಳಲ್ಲೂ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಜತೆಗೆ, ಅಸಭ್ಯ ಇ-ಮೇಲ್‌ಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಬೆದರಿಕೆಯೊಡ್ಡುತ್ತಿದ್ದಾರೆಂದೂ ಮಹಿಳೆಯು ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ಆರೋಪಗಳನ್ನು ಟ್ವಿಟರ್‌ನಲ್ಲಿ ನಿರಾಕರಿಸಿರುವ ನಿಖೀಲ್, “ದೂರು ನೀಡಿ ರುವ ಮಹಿಳೆ ಯಿಂದ ತಾವಿರುವ ವಸತಿ ಸಮುತ್ಛಯದಲ್ಲಿ ಕಾನೂನು ಬಾಹಿರವಾಗಿ ಕೆಲವು ನಿರ್ಮಾಣಗಳಾಗಿದ್ದವು. ಇದನ್ನು ಹಲವಾರು ವರ್ಷ ಗಳಿಂದ ಆಕ್ಷೇಪಿಸುತ್ತಾ ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ, ಆ ಮಹಿಳೆ ಅಸಭ್ಯ ಮೇಲ್ ಆರೋಪ ಹೊರಿಸಿ ಸೇಡು ತೀರಿಸಿ ಕೊಳ್ಳಲು ಪ್ರಯತ್ನಿಸಿದ್ದಾರೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.