ಕೆ.ಆರ್.ನಗರ: ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಹಾಗೂ ಮಾನವ ಕಳ್ಳಸಗಾಣೆ ಯಂತಹ ಘಟನೆಗಳು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು , ಇಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಪ್ರತಿಯೊಬ್ಬ ಪ್ರಜೆ ಹೋರಾಟ ಮಾಡುವ ಮೂಲಕ ಇವುಗಳನ್ನು ಬೇರು ಸಮೇತ ಕಿತ್ತೂಗೆಯಬೇಕೆಂದು ಹಿರಿಯ ಶೇಣಿ ನ್ಯಾ. ಬಸವರಾಜಪ್ಪ ಹೇಳಿದರು.
ಬಾಲ ಕಾರ್ಮಿಕ ವಿರೋ ಧಿ ದಿನಾಚರಣೆ ಪ್ರಯುಕ್ತ ಪಟ್ಟಣದ ನ್ಯಾಯಾಲಯದಿಂದ ಹೊರಟ ವಿವಿಧ ಶಾಲಾ ಮಕ್ಕಳ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಹಾಗೂ ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂತಹ ಪದ್ಧತಿಗಳು ದೇಶದ ಅಭಿವೃದ್ಧಿಗೆ ಮಾರಕ. ಇದರಿಂದ ಭವಿಷ್ಯದ ಪ್ರಜೆಗಳಾಗಬಹುದಾದ ಮಕ್ಕಳನ್ನು ಬಾಲ್ಯದಲ್ಲಿಯೇ ಅವರ ಪ್ರತಿಭೆಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗುತ್ತದೆ.
ಪ್ರತಿಯೊಬ್ಬ ಪೋಷಕರು ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಉತ್ತಮ ಪ್ರಜೆಯ ಕನಸು ಕಾಣಲು ಅವಕಾಶ ಕಲ್ಪಿಸಬೇಕು ಎಂದರು. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಮತ್ತು ಮಾನವ ಕಳ್ಳಸಗಾಣಿಕೆಯಂತಹ ಘಟನೆಗಳು ಕಾನೂನು ವಿರೋಧ ಮತ್ತು ಸಮಾಜ ವಿರೋ ಧಿಯಾಗಿದ್ದು ಇಂತಹ ಘಟನೆಗಳು ನಡೆಯದಂತೆ ಪ್ರತಿಯೊಬ್ಬ ಪ್ರಜೆ ಎಚ್ಚರ ವಹಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾ. ಕೆ.ಶ್ರೀನಾಥ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಮತ್ತು ಮಾನವ ಕಳ್ಳ ಸಾಗಾಣಿಕೆಯಿಂದ ಸಮಾಜದ ಮೇಲೆ ಆಗುವ ಕೆಟ್ಟ ಪರಿಣಾಮಗಳ ಕುರಿತು ನೆರೆದಿದ್ದ ವಿದ್ಯಾರ್ಥಿಗಳಿಗೆ ವಿವರಿಸಿದರು. ತಹಸಿಲ್ದಾರ್ ಮಹೇಶ್‌ಚಂದ್ರ, ಬಿಇಒ ಎಂ.ರಾಜು, ವಕೀಲರ ಸಂಘದ ಅಧ್ಯಕ್ಷ ಸಿ.ಡಿ.ಮಹದೇವಪ್ಪ. ಸಿಡಿಪಿಒ ಲೀಲಾಂಬಿಕೆ, ಸಮಾಜ ಕಲ್ಯಾಣಾ ಧಿಕಾರಿ ಅಶೋಕ್ ಮಾತನಾಡಿದರು.
ದೈಹಿಕ ಶಿಕ್ಷಣಾಧಿಕಾರಿ ಸೋಮಶೇಖರ್, ಬಾಲಕಿಯರ ಕಿರಿಯ ಕಾಲೇಜಿನ ಪ್ರಾಂಶುಪಾಲ ಮಲ್ಲೇಶ್, ಬಾಲಕರ ಕಿರಿಯ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಉಪ ಪ್ರಾಂಶುಪಾಲ ಸ್ವಾಮೇಗೌಡ, ಹನಸೋಗೆ ಮಂಜು, ಜಗದೀಶ್, ಪ್ರೇಮಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ತಿಪ್ಪೂರು ತಿಮ್ಮೇಗೌಡ, ವಕೀಲರಾದ ದಿಲೀಪ್, ಮಂಜುನಾಥ್ ಇತರರು ಇದ್ದರು.