Advertisement

ಆ.23ರಂದು ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ನಿಹಾಲ್ ತಾವ್ರೋ

11:23 AM Aug 23, 2021 | Team Udayavani |

ಉಡುಪಿ: ರಾಷ್ಟ್ರಮಟ್ಟದ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೀಸನ್ 12ನೇ ಆವೃತ್ತಿಯಲ್ಲಿ ಅರ್ಹತೆ ಗಳಿಸಿ, ಅಂತಿಮವಾಗಿ 5ನೇ ಸ್ಥಾನ ಗಳಿಸಿದ ಮೂಡುಬಿದಿರೆಯ ಯುವ ಗಾಯಕ ನಿಹಾಲ್ ತಾವ್ರೋ ಸೋಮವಾರ (ಆಗಸ್ಟ್ 23) ಸಂಜೆ 3ಗಂಟೆಗೆ ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ.

Advertisement

ಸಂಜೆ 4ಗಂಟೆಗೆ ಉದಯವಾಣಿ ಡಾಟ್ ಕಾಮ್ ನಿಹಾಲ್ ತಾವ್ರೋ ಜತೆ ಫೇಸ್ ಬುಕ್ ಲೈವ್ ಸಂದರ್ಶನ ನಡೆಸಲಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಸಂಗೀತ ಪಯಣ, ಯಶಸ್ಸಿನ ಕುರಿತು  ಮನದಾಳದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.

ಕನ್ನಡದ “ಸರಿಗಮಪ” ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಿಹಾಲ್ ಕನ್ನಡದ “ಯಾರಿವಳು”, ಜೊತೆ, ಜೊತೆಯಲಿ, ನನ್ನರಸಿ ರಾಧೆ, ಗಿಣಿರಾಮ ಮುಂತಾದ ಧಾರಾವಾಹಿಗಳ ಶೀರ್ಷಿಕೆ ಗೀತೆ ಹಾಡಿದ್ದರು. ಅಷ್ಟೇ ಅಲ್ಲ ಲವ್ ಮಾಕ್ಟೆಲ್ ಸಿನಿಮಾದ ನೀನೆ ಎಂದಿಗೂ, ಪ್ರೀಮಿಯರ್ ಪದ್ಮಿನಿ ಸಿನಿಮಾದ ನಾ ಹುಡುಕುವ ನಾಳೆ, ಗಿರ್ ಗಿಟ್ ಸಿನಿಮಾಗಳಲ್ಲಿ ಹಾಡನ್ನು ಹಾಡುವ ಮೂಲಕ ಜನಪ್ರಿಯರಾಗಿದ್ದರು.

ಬಾಲಿವುಡ್  ನ ಇಂಡಿಯನ್ ಐಡಲ್ 12ನೇ ಸೀಸನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಗ್ರ್ಯಾಂಡ್ ಫಿನಾಲೆಯಲ್ಲಿ 5ನೇ ಸ್ಥಾನ ಪಡೆದಿರುವ ಕನ್ನಡಿಗ, ಯುವ ಗಾಯಕ ನಿಹಾಲ್ ತಾವ್ರೋ ಅವರ ಫೇಸ್ ಬುಕ್ ಲೈವ್ (ಸಂಜೆ 4ಗಂಟೆಗೆ) ಕಾರ್ಯಕ್ರಮ ತಪ್ಪದೇ ವೀಕ್ಷಿಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next