Advertisement

ಇಂಡಿಯನ್‌ ಐಡೋಲ್‌ ಗಾಯನ ಸ್ಪರ್ಧೆ: ಅಂತಿಮ ಕಣದಲ್ಲಿ ಮೂಡುಬಿದಿರೆಯ ನಿಹಾಲ್‌ ತಾವ್ರೋ

12:23 AM Aug 10, 2021 | Team Udayavani |

ಮೂಡುಬಿದಿರೆ: ಸೋನಿ ಟಿವಿಯ ಇಂಡಿಯನ್‌ ಐಡೋಲ್‌ ಗಾಯನ ರಿಯಾಲಿಟಿ ಶೋ ಸ್ಪರ್ಧೆಯ ಅಂತಿಮ ಕಣಕ್ಕೆ ಮೂಡುಬಿದಿರೆಯ ಕಡಲಕೆರೆ ಪರಿಸರದ ನಿಹಾಲ್‌ ತಾವ್ರೋ ಕೂಡ ಆಯ್ಕೆಯಾಗಿದ್ದಾರೆ. ಒಟ್ಟು 6 ಮಂದಿ ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ. ಈ ಅವಕಾಶ ಪಡೆದ ಮೊದಲ ಕನ್ನಡಿಗ ತಾವ್ರೋ ಆಗಿದ್ದಾರೆ.

Advertisement

ಮೂರನೇ ತರಗತಿಯಲ್ಲಿರುವಾಗಲೇ ಆಲ್ಬಂ ಸಾಂಗ್‌ ಒಂದಕ್ಕೆ ಯಾವುದೇ ತರಬೇತಿ, ರಿಹರ್ಸಲ್‌ ಇಲ್ಲದೆ ಹಾಡಿದ್ದ ನಿಹಾಲ್‌ ಅಳ್ವಾಸ್‌ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿ.

ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿಯಲ್ಲದೇ ಹಲವು ಟಿ ವಿ ಷೋಗಳಲ್ಲಿ ಭಾಗವಹಿಸಿದವರು. ನಾದಬ್ರಹ್ಮ ಹಂಸಲೇಖ ಅವರು “ನಿಹಾಲ್‌ ತಾವ್ರೋ ಅಲ್ಲಪ್ಪಾ ನಿಹಾಲ್‌ ದೇವ್ರು’ ಎಂದಿದ್ದರೆ, ಗಾಯಕ ವಿಜಯ ಪ್ರಕಾಶ್‌ “ನಿಹಾಲ್‌ ವಿಶ್ವದ ಗಮನ ಸೆಳೆಯುವ ಗಾಯಕನಾಗುತ್ತಾನೆ,’ ಎಂದು ಝೀ ಕನ್ನಡದ ಷೋದಲ್ಲಿ  ಭವಿಷ್ಯ ನುಡಿದಿದ್ದರು..

ಕನ್ನಡ, ತುಳು, ಕೊಂಕಣಿ ಸಹಿತ ಹಲವು ಸಿನೆಮಾಗಳಲ್ಲಿ ಹಾಡಿರುವ ನಿಹಾಲ್‌ ರ “ಗಿರ್ಗಿಟ್‌’ ತುಳು ಸಿನೆಮಾದ ಗೀತೆ ಅರೆ ಗಾಲಡ್‌ ಮರುಭೂಮಿಡ್‌’ ಜನಪ್ರಿಯ. ನೂರಕ್ಕೂ ಹೆಚ್ಚು ಹಾಡುಗಳನ್ನು ತಾವ್ರೋ ಹಾಡಿದ್ದಾರೆ. ತಾವ್ರೋ ಆವರನ್ನು ಬೆಂಬಲಿಸಿ ಆ. 14ರ ವರೆಗೆ Sony ಆ್ಯಪ್‌ ಹಾಗೂ firstcry.com ಮೂಲಕ ಮತಗಳನ್ನು ಚಲಾಯಿಸಿ ಬೆಂಬಲವನ್ನು ವ್ಯಕ್ತ ಪಡಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next