Advertisement

ಇಂದಿನಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ: ಈ ನಿಯಮಗಳನ್ನು ಪಾಲಿಸಲೇಬೇಕು

12:58 PM Dec 28, 2021 | Team Udayavani |

ಬೆಂಗಳೂರು: ಒಮಿಕ್ರಾನ್‌ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತೆ ರಾತ್ರಿ ಕರ್ಫ್ಯೂ ಜಾರಿಗೆ ನಿರ್ಧರಿಸಿದ್ದು, ಇಂದಿನಿಂದ (ಡಿ. 2) ಜ. 7ರ ವರೆಗೆ ಇದು ಜಾರಿಯಲ್ಲಿರಿದೆ. ರಾತ್ರಿ 10ರಿಂದ ಬೆಳಗಿನ ಜಾವ 5ರವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರವಿವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

Advertisement

ಸಾರ್ವಜನಿಕವಾಗಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಡಿ. 30ರಿಂದ ಜನವರಿ 02 ರವರೆಗೆ ರೆಸ್ಟೊರೆಂಟ್ , ಪಬ್, ಕ್ಲಬ್ ಮತ್ತು ಹೋಟೆಲ್ ಗಳು 50 % ಮಾತ್ರ ಕಾರ್ಯ ನಿರ್ವಹಿಸಬೇಕು. ಎಲ್ಲಾ ಸಿಬ್ಬಂದಿಗಳು ಅಗತ್ಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ ಆರ್ ಟಿ-ಪಿಸಿಆರ್ ರಿಪೋರ್ಟ್ ಹೊಂದಿರಬೇಕು. ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು.

ಇದನ್ನೂ ಓದಿ:ನೈಟ್ ಕರ್ಫ್ಯೂ ಗೆ ಪದೇ ಪದೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ: ಸಚಿವ ಸುಧಾಕರ್

ಡಿ. 28ರಿಂದ ಮದುವೆ, ಶುಭ ಸಮಾರಂಭಗಳು, ಕಾನ್ಫರೆನ್ಸ್ ಗಳು, ಮೀಟಿಂಗ್ ಗಳು ಮತ್ತು ಇನ್ನಿತರ ಎಲ್ಲಾ ಸಭೆ, ಕಾರ್ಯಕ್ರಮಗಳಲ್ಲಿ 300 ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ. ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ಕೋವಿಡ್ ತಡೆಗೆ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಆಯೋಜಕರು ಸಮಾರಂಭದಲ್ಲಿ ಕಡ್ದಾಯವಾಗಿ ಅನುಸರಿಸಬೇಕು.

ಯಾವುದಕ್ಕೆ ಅವಕಾಶ?

Advertisement

1 ರೋಗಿಗಳು ಮತ್ತು ಅವರ ಆರೈಕೆ ಮಾಡುವ ಸಂಬಂಧಿಗಳ ಸಂಚಾರ

2 ರಾತ್ರಿ ಅವಧಿಯಲ್ಲಿನ ಕೈಗಾರಿಕೆಗಳು/ಕಂಪೆನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಗುರುತಿನ ಚೀಟಿ ಜತೆಗೆ ಸಂಚಾರ.

3 ಗುರುತಿನ ಚೀಟಿ ಸಹಿತ ಟೆಲಿಕಾಂ ಮತ್ತು ಇಂಟರ್‌ ನೆಟ್‌ ಸೇವೆಗಳನ್ನು ಒದಗಿಸುವ ನೌಕರರ ಸಂಚಾರ

4 ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಸಿಬಂದಿಗೂ ಇದೇ ನಿಯಮ

5 ವೈದ್ಯಕೀಯ, ಔಷಧೀಯ ಸೇರಿದಂತೆ ಮತ್ತಿತರ ತುರ್ತು ಮತ್ತು ಅಗತ್ಯ ಸೇವೆಗಳು

6 ಸರಕು ಸಾಗಣೆ ವಾಹನಗಳು, ಇ-ಕಾಮರ್ಸ್‌ ಕಂಪೆನಿಗಳು

7 ಬಸ್‌, ರೈಲು, ಮೆಟ್ರೋ, ವಿಮಾನ ಸೇವೆಗಳು, ಟ್ಯಾಕ್ಸಿ, ಖಾಸಗಿ ವಾಹನಗಳಿಗೆ ಅವಕಾಶ. ಪ್ರಯಾಣಿಕರು ಟಿಕೆಟ್‌ ಅಥವಾ ಪೂರಕ ದಾಖಲೆ ತೋರಿಸಿ ಸಂಚರಿಸಲು ಅನುಮತಿ.

ಯಾವುದು ನಿರ್ಬಂಧ?

1 ಹೊಟೇಲ್‌ಗ‌ಳು, ಪಬ್‌ಗಳು, ಕ್ಲಬ್‌ಗಳಲ್ಲಿ ಶೇ. 50ರ ಮಿತಿ

2 ಮದುವೆ, ಇತರ ಕಾರ್ಯಕ್ರಮಗಳಿಗೆ 300 ಮಂದಿಯ ಮಿತಿ

3 ಐಟಿ ಮತ್ತಿತರ ಕಂಪೆನಿ ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next