Advertisement

ಹೊಸ ವರ್ಷಾಚರಣೆಗೆ ನೈಟ್‌ ಕರ್ಫ್ಯೂ ಕಾರ್ಮೋಡ‌

01:39 PM Dec 24, 2020 | Suhan S |

ಮೈಸೂರು: ವರ್ಷಾಂತ್ಯದಲ್ಲಿ ಪ್ರವಾಸಿಗರಿಂದ ಝಗಮಗಿಸುತ್ತಿದ್ದ ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳು ಈ ಬಾರಿ ನಿರೀಕ್ಷಿತ ಮಟ್ಟದ ಪ್ರವಾಸಿಗರಿಲ್ಲದೆ ಸೊರಗಿರುವ ನಡುವೆ, ಸರ್ಕಾರ ನೈಟ್‌ಕರ್ಫ್ಯೂ ಜಾರಿ ಮಾಡಿರುವುದರಿಂದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ.

Advertisement

ಮೈಸೂರಿನತ್ತ ಭಾರಿ ಸಂಖ್ಯೆಯಲ್ಲಿ ದಾಂಗುಡಿಇಡುತ್ತಿದ್ದ ಪ್ರವಾಸಿಗರು ಕೊರೊನಾ ಹಿನ್ನೆಲೆ ಈ ಬಾರಿ ಸುಳಿಯದೆ ಇರುವುದರಿಂದ ಪ್ರವಾಸಿ ತಾಣಗಳುಸೊರಗಿವೆ. ಪ್ರತಿ ವರ್ಷ ಡಿ.15ರ ನಂತರ ಮೈಸೂರುನಗರ ಸೇರಿದಂತೆ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳು

ಹಾಗೂ ಹೋಟೆಲ್‌, ಮಾಲ್‌ಗ‌ಳು ಜನರಿಂದ ತುಂಬಿತುಳುಕುತ್ತಿದ್ದವು. ಸಾಮಾನ್ಯವಾಗಿ ಈ ಹದಿನೈದುದಿನಗಳ ಅವಧಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರುಮೈಸೂರಿಗೆ ಭೇಟಿ ಕೊಡುತ್ತಿದ್ದರು. ಆದರೆ, ಈ ಬಾರಿಪ್ರವಾಸಿಗರ ಭೇಟಿ 80 ರಿಂದ 1 ಲಕ್ಷ ಮಂದಿಗೆ ಸೀಮಿತವಾಗಿದೆ.

ಹೊಸ ವರ್ಷಾಚರಣೆ ಹಾಗೂ ವರ್ಷಾಂತ್ಯದಲ್ಲಿಬರುವ ಸಾಲು ಸಾಲು ರಜೆಗಳಿಂದ ದೇಶದ ವಿವಿಧ ಭಾಗ ಹಾಗೂ ಹೊರ ಜಿಲ್ಲೆಗಳಿಂದ ಮೈಸೂರು ಸೇರಿದಂತೆ ಪಕ್ಕದ ಚಾಮರಾಜನಗರ ಹಾಗೂ ಕೊಡುಗು ಜಿಲ್ಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದರು. ಆದರೆ, ಕೋವಿಡ್ ಹಿನ್ನೆಲೆ ಈ ಸಂಖ್ಯೆ ಕ್ಷೀಣಿಸಿತ್ತಾದರೂ,ಸೋಂಕಿನ ತೀವ್ರತೆ ತಗ್ಗಿದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಸಾಗಿದರೂ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಣೆ ಕಂಡಿಲ್ಲ. ಪರಿಣಾಮ ಈ ಬಾರಿ ಹೊಸ ವರ್ಷಾಚರಣೆಗೆ ನಗರದ ವಿವಿಧ ಹೋಟೆಲ್‌, ರೆಸ್ಟೋ ರೆಂಟ್‌ ಹಾಗೂ ಸ್ಟಾರ್‌ ಹೋಟೆಲ್‌ಗ‌ಳು ಕಾರ್ಯಕ್ರಮಗಳನ್ನು ಕೈಬಿಟ್ಟಿದೆ.

ಮಾರ್ಗಸೂಚಿ: ಪ್ರತಿವರ್ಷ ಹಲವು ಹೋಟೆಲ್‌ಗ‌ಳು ಕೇಕ್‌ಉತ್ಸವ, ಪಾರ್ಟಿ, ನೃತ್ಯ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯ ಕ್ರಮಗಳನ್ನು ಆಯೋಜಿಸಿಪ್ರವಾಸಿಗರನ್ನು ಸೆಳೆಯುತ್ತಿದ್ದವು. ಜೊತೆಗೆಅರಮನೆ ಮಂಡಳಿಯಿಂದ ಅರಮನೆ ಆವರಣದಲ್ಲಿ ಹೊಸವರ್ಷಾಚರಣೆ ಅಂಗವಾಗಿ ಸಂಗೀತ ಗೋಷ್ಠಿಏರ್ಪಡಿಸಲಾಗುತ್ತಿತ್ತು. ಆದರೆ, ಕೋವಿಡ್‌-19 ಮಾರ್ಗಸೂಚಿ ಹಾಗೂಸರ್ಕಾರದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕಿರುವುದರಿಂದ ಈಎಲ್ಲಾ ಕಾರ್ಯಕ್ರಮಗಳನ್ನು ಕೈಬಿಟ್ಟು ತಟಸ್ಥವಾಗಿ ಉಳಿದಿವೆ.

Advertisement

ಸಂಭ್ರಮಾಚರಣೆಗೆ ತಡೆ: ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದರಿಂದ ರಾತ್ರಿ 10ರ ನಂತರ ಸಾರ್ವಜನಿಕರ ಓಡಾಟಕ್ಕೆ ಅನುಮತಿ ಇಲ್ಲದಿರುವುದರಿಂದ ಈ ಬಾರಿ ಹೊಸ ವರ್ಷಾಚರಣೆ ಮಾಡುವವರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಕ್ರಿಸ್‌ಮಸ್‌ ಮತ್ತು ಹೊವರ್ಷದ ಸಂಭ್ರಮಕ್ಕೆ ಕಡಿವಾಣ ಬಿದ್ದಿದ್ದು,ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರದ ಆದೇಶಪಾಲಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಪ್ರಕಾಶ್‌ಗೌಡ ಪತ್ರಿಕೆಗೆ ತಿಳಿಸಿದ್ದಾರೆ.

ಪ್ರವಾಸಿ ತಾಣಗಳಿಗೆ ನಿರ್ಬಂಧ ಇಲ್ಲ : ಜಿಲ್ಲೆಯಲ್ಲಿರುವ ಚಾಮುಂಡಿ ಬೆಟ್ಟ, ಅರಮನೆ, ಮೃಗಾಲಯ, ನಾಗರಹೊಳೆ ಸಫಾರಿ, ಟಿಬೇಟಿಯನ್‌ ಕ್ಯಾಂಪ್‌, ತಲಕಾಡು, ಶ್ರೀಕಂಠೇಶ್ವರ ದೇವಾಲಯ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶವಿದೆ. ಪ್ರವಾಸಿಗರು ಕಡ್ಡಾಯವಾಗಿ ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುವುದು ಬಿಟ್ಟರೆ, ಮತ್ಯಾವುದೇ ನಿರ್ಬಂಧ ಇರುವುದಿಲ್ಲ

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ,ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.ಕೊರೊನಾ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಈಗೀಗ ಸುಧಾರಣೆ ಕಂಡಿದ್ದು, ಜಿಲ್ಲೆಯ ಪ್ರವಾಸೋದ್ಯಮ ಚೇತರಿಕೆಕಾಣುತ್ತಿದೆ. ಮೋತಿಲಾಲ್‌ ಲಮಾಣಿ, ಜಂಟಿ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಮೈಸೂರು ವಿಭಾಗ

ಪ್ರತಿ ಬಾರಿ ಹೊಸ ವರ್ಷ ಅಂಗವಾಗಿ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿಹಲವು ಈವೆಂಟ್‌ ಆಯೋಜಿಸಲಾಗು ತ್ತಿತ್ತು. ಆದರೆ, ಈ ವರ್ಷ ಕೋವಿಡ್ ಇರುವುದರಿಂದಕೋವಿಡ್‌ ಮಾರ್ಗಸೂಚಿ  ಹಾಗೂ ಸರ್ಕಾರದ ಕೆಲವು ಕ್ರಮಗಳಿಂದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುತ್ತಿಲ್ಲ. ಎಂದಿನಂತೆ ಪ್ರವಾಸಿಗರು ಬರಬಹುದು ಅಷ್ಟೇ. ನಾರಾಯಣ ಗೌಡ,, ಅಧ್ಯಕ್ಷ ಹೋಟೆಲ್‌ಮಾಲಿಕರ ಸಂಘ ಮೈಸೂರು ಜಿಲ್ಲೆ

 

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next