Advertisement

BREAKING : ರಾಜ್ಯದಲ್ಲಿ ಮೇ 4 ರವರೆಗೆ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿ

11:22 PM Apr 20, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಮುಂದಿನ ಮೇ 4 ರವರೆಗೆ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆ ನೈಟ್ ಕರ್ಫ್ಯೂ ಕೂಡ ಜಾರಿಯಲ್ಲಿ ಇರುತ್ತದೆ. ಕೋವಿಡ್ ಹಿನ್ನೆಲೆ ಸರ್ಕಾರ ಹೊಸ ಮಾರ್ಗ ಸೂಚಿ ಪ್ರಕಟ ಮಾಡಿದೆ

Advertisement

ನೈಟ್‌ ಕರ್ಫ್ಯೂ ಮಾರ್ಗಸೂಚಿಗಳು
– ದೂರದ ಊರುಗಳಿಗೆ ತೆರಳುವ ಬಸ್‌ಗಳು, ರೈಲು ಸೇವೆ, ವಿಮಾನ ಸೇವೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಬಸ್‌ ನಿಲ್ದಾಣಗಳಿಗೆ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು, ಅಗ್ರಿಗೇಟರ್‌ಗಳಿಂದ ಕಾರ್ಯಾಚರಣೆ ಮಾಡುವ ಟ್ಯಾಕ್ಸಿ, ಕ್ಯಾಬ್‌ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಡ್ಡಾಯವಾಗಿ ಪ್ರಯಾಣಕ್ಕೆ ಸಂಬಂಧಿಸಿದ ಟಿಕೆಟ್‌ ಅಥವಾ ಸೂಕ್ತ ದಾಖಲೆಯನ್ನು ಹೊಂದಿರಬೇಕು.

– ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಜನ ಸಂಚಾರ ನಿಷೇಧ. ಅಗತ್ಯ ಇದ್ದವರಿಗೆ ಮಾತ್ರ ಅವಕಾಶ.

– ರೋಗಿಗಳು ಮತ್ತು ಅವರ ಆರೈಕೆ ಮಾಡುವವರಿಗೆ ಕರ್ಫ್ಯೂ ಅವಧಿಯಲ್ಲಿ ಸಂಚರಿಸಬಹುದು.

– ರಾತ್ರಿ ಕೆಲಸ ಮಾಡುವ ಕಂಪೆನಿಗಳು/ ಕೈಗಾರಿಕೆಗಳಿಗೆ ಅನುಮತಿ ಇದ್ದು, ಅಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಆಯಾ ಕೈಗಾರಿಕೆಗಳು ನೀಡಿದ ಗುರುತಿನ ಚೀಟಿ ತೋರಿಸಿ, ಕೆಲಸಕ್ಕೆ ತೆರಳಲು ಅವಕಾಶ ಇದೆ.

Advertisement

– ದೂರಸಂಪರ್ಕ ಮತ್ತು ಇಂಟರ್‌ನೆಟ್‌ ಸೇವೆಗಳನ್ನು ಪೂರೈಸುವ ಕಂಪೆನಿಗಳ ನೌಕರರು ಆಯಾ ಕಂಪೆನಿ ನೀಡಿರುವ ಗುರುತಿನ ಚೀಟಿ ತೋರಿಸಿ ಓಡಾಡಬಹುದು. ಕಚೇರಿಯಿಂದಲೇ ಕಾರ್ಯನಿರ್ವಹಿಸುವ ಅನಿವಾರ್ಯತೆ ಇರುವ ನೌಕರರು ಮಾತ್ರ ಕಚೇರಿಗೆ ತೆರಳಬಹುದು. ಉಳಿದವರು ವರ್ಕ್‌ ಫ್ರಾಮ್‌ ಹೋಂ.

– ವೈದ್ಯಕೀಯ, ಔಷಧ, ತುರ್ತು ಸೇರಿದಂತೆ ಮತ್ತಿತರ ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಉಳಿದ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿರುತ್ತದೆ.

– ಸರಕು-ಸಾಗಣೆ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಸರಕು ಸಾಗಿಸುವ ಲಾರಿ ಮತ್ತಿತರ ವಾಹನಗಳು, ಖಾಲಿ ಇರುವ ಸರಕು ಸಾಗಣೆ ವಾಹನಗಳು ಕೂಡ ಎಂದಿನಂತೆ ಸಂಚರಿಸಲು ಅವಕಾಶ ಇರುತ್ತದೆ.

– ಹೋಂ ಡೆಲಿವರಿ, ಇ-ಕಾಮರ್ಸ್‌ ಕಂಪೆನಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಎಂದಿನಂತೆ ಸೇವೆ ಲಭ್ಯ.

ಏನಿರುವುದಿಲ್ಲ?
– ದೇವಸ್ಥಾನ, ಚರ್ಚ್‌, ಮಸೀದಿ ಬಂದ್‌ (ನಿತ್ಯ ಪೂಜೆ, ಪ್ರಾರ್ಥನೆಗಷ್ಟೇ ಅವಕಾಶ)
– ಶಾಲಾ-ಕಾಲೇಜು
– ಕೋಚಿಂಗ್‌ ಸೆಂಟರ್‌
– ಸಿನೆಮಾ ಥಿಯೇಟರ್‌
– ಶಾಪಿಂಗ್‌ ಮಾಲ್‌
– ಜಿಮ್‌, ಸ್ಪಾಗಳು
– ಯೋಗ ಕೇಂದ್ರ
– ಕ್ರೀಡಾ ಸಂಕೀರ್ಣಗಳು
– ಈಜು ಕೋಳ
– ಮನೋರಂಜನ ಪಾರ್ಕ್‌
– ರಂಗ ಮಂದಿರ
– ಸಭಾಂಗಣ
– ಎಲ್ಲ ರೀತಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ, ಕ್ರೀಡಾ, ಮನೋರಂಜನ, ಶೈಕ್ಷಣಿಕ ಸಭೆ ಸಮಾರಂಭಗಳು ನಿಷೇಧ

ಏನಿರುತ್ತದೆ?
– ಬಸ್, ರೈಲು ಸೇವೆ, ವಿಮಾನ ಸೇವೆ ಟ್ಯಾಕ್ಸಿ, ಕ್ಯಾಬ್‌ಗಳು
– ಪೆಟ್ರೋಲ್‌ ಪಂಪ್‌
– ಸರಕು ಸಾಗಣೆ ವಾಹನಗಳು
– ವೈದ್ಯಕೀಯ ಸೇವೆಗೆ ಸಂಬಂಧಿಸಿದ ಸೇವೆಗಳು
– ಆನ್‌ಲೈನ್‌ ಕ್ಲಾಸ್‌ಗಳು
– ಕ್ರೀಡಾ ಪಟುಗಳಿಗಾಗಿ ಈಜುಕೊಳ
– ರೆಸ್ಟೋರೆಂಟ್‌, ಹೋಟೆಲ್‌, ಮದ್ಯದಂಗಡಿಗಳಲ್ಲಿ ಪಾರ್ಸೆಲ್‌ ಮಾತ್ರ

– ನಿರ್ಮಾಣ ಚಟುವಟಿಕೆ, ದುರಸ್ತಿ ಕಾರ್ಯ
– ಪೂರ್ವ ಮುಂಗಾರು ಸಿದ್ಧತೆ ಕಾಮಗಾರಿ
– ಎಲ್ಲ ಕೈಗಾರಿಕೆಗಳು (ಸಿಬಂದಿಗೆ ಐಡಿ ಕಾರ್ಡ್‌ ಕಡ್ಡಾಯ)
– ನ್ಯಾಯಬೆಲೆ ಅಂಗಡಿ
– ಆಹಾರ, ಧವಸ ಧಾನ್ಯ, ಹಣ್ಣು , ತರಕಾರಿ, ಹಾಲು ಉತ್ಪನ್ನಗಳು, ಮೀನು, ಮಾಂಸ, ಪಶು ಆಹಾರಗಳ ಮಳಿಗೆ
ತೆರೆದ ಪ್ರದೇಶದಲ್ಲಿ ಅಥವಾ ಮೈದಾನದಲ್ಲಿ ಸಗಟು, ತರಕಾರಿ, ಹಣ್ಣು, ಹೂವು ಮಾರುಕಟ್ಟೆ
– ಬ್ಯಾಂಕು, ವಿಮಾ ಕಚೇರಿ, ಎಟಿಎಂ, ಎಲ್ಲ ರೀತಿಯ ಇ-ಕಾಮರ್ಸ್‌
– ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮ
– ಸೆಲೂನ್‌, ಬ್ಯೂಟಿ ಪಾರ್ಲರ್‌ ಗಳು

ವಾರಾಂತ್ಯ ಕರ್ಫ್ಯೂ
-ಬೆಳಿಗ್ಗೆ 6ರಿಂದ 10ರ ವರೆಗೆ ಆಹಾರ ಸಾಮಗ್ರಿ ಖರೀದಿಗೆ ಅವಕಾಶ
-ಸಾರ್ವಜನಿಕ ಸಾರಿಗೆ ಸೌಲಭ್ಯ. ಮದುವೆಗೆ 50 ಜನ, ಅಂತ್ಯಸಂಸ್ಕಾರಕ್ಕೆ 20 ಮಂದಿಗೆ ಅವಕಾಶ
-ಕಾಮಗಾರಿಗಳಿಗೆ ಅವಕಾಶವಿಲ್ಲ. ರಾತ್ರಿ ಕರ್ಫ್ಯೂ ವೇಳೆ ಜಾರಿಯಲ್ಲಿದ್ದ ಎಲ್ಲ ನಿರ್ಬಂಧಗಳು ಶನಿವಾರ ಮತ್ತು ರವಿವಾರಕ್ಕೆ ಸಂಪೂರ್ಣ ಅನ್ವಯ.
-ರಾತ್ರಿ ಕರ್ಫ್ಯೂ ವೇಳೆ ಅನುಮತಿ ಇರುವುದಕ್ಕೆ ಮಾತ್ರ ಅನುಮತಿ. ತುರ್ತು ಸೇವೆ ನೀಡುವ ಕಂಪೆನಿ ಸಿಬಂದಿಗೆ ಓಡಾಟ ನಡೆಸಲು ಅವಕಾಶವಿದ್ದು, ಕಂಪೆನಿ ಐಡಿ ಕಾರ್ಡ್‌ ಬಳಸಬೇಕು.
– ವ್ಯಾಕ್ಸಿನ್‌ ಹಾಕಿಸಿಕೊಳ್ಳುವವರಿಗೆ ಅವಕಾಶ, ಸೂಕ್ತ ದಾಖಲೆ ಅಗ ತ್ಯ
– ನಿರ್ಮಾಣ ಸಹಿತ ಯಾವುದೇ ಕಾಮಗಾರಿಗೆ ಅವಕಾಶವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next