Advertisement

ಕೊಕೇನ್‌ ಮಾರಾಟ ದಂಧೆಯಲ್ಲಿ ಮತ್ತದೇ ನೈಜೀರಿಯನ್ನರ ಬಂಧನ

11:13 AM Apr 04, 2017 | Team Udayavani |

ಬೆಂಗಳೂರು: ಮಾದಕ ವಸ್ತು ಕೊಕೇನನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಬಾನುಗೂ ಚಿಬುಕಿ (27) ನವಾಟು ಡಾರ್ಲಿಂಗ್‌ಟನ್‌ (34) ಬಂಧಿತರು.

Advertisement

ಆರೋಪಿ ಗಳಿಂದ 10 ಗ್ರಾಂ ಕೊಕೇನ್‌, 2 ಲ್ಯಾಪ್‌ಟಾಪ್‌,  2 ಪಾಸ್‌ಪೋರ್ಟ್‌ ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರೂ, 2014ರಲ್ಲಿ ವಾಣಿಜ್ಯ ಮತ್ತು ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದು, ಕೊತ್ತನೂರಿನ ದೊಡ್ಡಗುಬ್ಬಿ ಅಂಚೆ ಬಿಳಿಶಿವಾಲೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮೋಜಿನ ಜೀವನಕ್ಕಾಗಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದು, ಮುಂಬೈ, ಆಂಧ್ರದಿಂದ ರೈಲಿನ ಮೂಲಕ ಕೆಜಿಗಟ್ಟಲೇ ಮಾದಕ ವಸ್ತು ತರಿಸಿ, ಅದನ್ನು 5 ಮತ್ತು 10 ಗ್ರಾಂಗಳ ತೂಕದಲ್ಲಿ ಸಣ್ಣ -ಸಣ್ಣ ಪ್ಯಾಕೆಟ್‌ಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಶ್ರೀಮಂತರ ಮಕ್ಕಳಿಗೆ ಪ್ರತಿ ಗ್ರಾಂಗೆ 5ರಿಂದ8 ಸಾವಿರದವರೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವೀಸಾ ಅವಧಿ ಮುಗಿದಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ತನಿಖೆ ಮಾಹಿತಿ ಲಭ್ಯವಾಗಿಲ್ಲ. ಇವರಿಗೆ ವಿದ್ಯಾರ್ಥಿಗಳು ಹಾಗೂ ಮಾದಕ ವ್ಯಸನಿಗಳೇ ಟಾರ್ಗೆಟ್‌ ಆಗಿದ್ದರು. ಅವರಿಗಾಗಿ ನಗರದಲ್ಲಿ ಹುಡುಕಾಟ ನಡೆಸುತ್ತಿದ್ದ ಇಬ್ಬರೂ ವಿದೇಶಿಯರು, ಸ್ಥಳೀಯರ ನೆರವು ಪಡೆದು ಮಾರಾಟ ಮಾಡುತ್ತಿದ್ದಾರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next