Advertisement

ಸ್ಪೇನ್‌ ದಾಳಿಗೆ ಬೆಚ್ಚಿದ ನೈಗರ್‌

11:51 AM Oct 11, 2017 | |

ಕೊಚ್ಚಿ: ಯುರೋಪಿಯನ್‌ ಚಾಂಪಿಯನ್‌ ಸ್ಪೇನ್‌ ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಮಂಗಳವಾರ ಕೊಚ್ಚಿಯಲ್ಲಿ ನಡೆದ “ಡಿ’ ವಿಭಾಗದ ಪಂದ್ಯದಲ್ಲಿ ಸ್ಪೇನ್‌ 4-0 ಗೋಲುಗಳಿಂದ ನೈಗರ್‌ಗೆ ಸೋಲುಣಿಸಿತು. ಇದೇ ಮೊದಲ ಸಲ ಕಿರಿಯರ ಫ‌ುಟ್‌ಬಾಲ್‌ ಆಡಲಿಳಿದ ನೈಗರ್‌ ಮೊದಲ ಪಂದ್ಯದಲ್ಲಿ ಕೊರಿಯಾಕ್ಕೆ 1-0 ಅಂತರದ ಸೋಲುಣಿಸಿ ಸುದ್ದಿಯಾಗಿತ್ತು.

Advertisement

ಸ್ಪೇನ್‌ ತನ್ನ ಆರಂಭಿಕ ಪಂದ್ಯದಲ್ಲಿ ಬ್ರಝಿಲ್‌ಗೆ 1-2 ಅಂತರದಿಂದ ಶರಣಾಗಿತ್ತು. ಸಹಜವಾಗಿಯೇ ಪರಾಜಿತ ತಂಡಗಳೆರಡರ ನಡುವಿನ ಕಾಲ್ಚೆಂಡಿನ ಕದನ ವಿಪರೀತ ನಿರೀಕ್ಷೆ ಮೂಡಿಸಿತ್ತು. ಆದರೆ ಏಕಪಕ್ಷೀಯವಾಗಿ ಮುಗಿಯಿತು. ಸ್ಪೇನ್‌ ಪರ ನಾಯಕ ಅಬೆಲ್‌ ರಿಜ್‌ 2 ಗೋಲು ಹೊಡೆದರೆ, ಸಿಸರ್‌ ಗೆಲಾಬರ್ಟ್‌ ಮತ್ತು ಸರ್ಗಿಯೊ ಗೊಮೆಜ್‌ ಒಂದೊಂದು ಗೋಲು ಹೊಡೆದರು. 

ಗೋವಾದಲ್ಲಿ ನಡೆದ ಕೋಸ್ಟಾರೀಕ-ಗಿನಿ ನಡುವಿನ ಸ್ಪರ್ಧೆ 2-2 ಗೋಲುಗಳಿಂದ ಡ್ರಾಗೊಂಡಿತು. ಇವೆರಡೂ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next