Advertisement

ಇಂದು ಆರ್‌ಬಿಐ ನೀತಿ ಪರಾಮರ್ಶೆ: ನಿಫ್ಟಿ ದಾಖಲೆ

08:40 AM Aug 02, 2017 | Team Udayavani |

ಮುಂಬಯಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ನೀತಿ ಪರಾಮರ್ಶೆ ಮಂಗಳವಾರದಿಂದಲೇ ಆರಂಭವಾಗಿದ್ದು, ಬುಧವಾರ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ. ಇದು ಷೇರುಪೇಟೆ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದ್ದು, ಮಂಗಳವಾರ ಹೂಡಿಕೆದಾರರು ಷೇರು ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ತೋರಿದರು. ಪರಿಣಾಮ ನಿಫ್ಟಿ ಮತ್ತೂಂದು ಮೈಲುಗಲ್ಲು ತಲುಪಿದ್ದು, 37 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 10,114ರಲ್ಲಿ ವಹಿವಾಟು ಕೊನೆಗೊಳಿಸಿತು.

Advertisement

ಮಧ್ಯಂತರ ವಹಿವಾಟಿನ ವೇಳೆ ಒಂದು ಹಂತದಲ್ಲಿ ನಿಫ್ಟಿ 62 ಅಂಕ ಏರಿಕೆಯಾಗಿತ್ತು. ಇನ್ನು ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 60 ಅಂಕ ಏರಿಕೆ ದಾಖಲಿಸಿ, 32,575 ರಲ್ಲಿ ಕೊನೆಗೊಂಡಿತು. ಆರ್‌ಬಿಐ ಪರಾಮರ್ಶೆಯ ಜೊತೆಗೆ ಕಾರ್ಪೊರೆಟ್‌ ಕಂಪೆನಿಗಳ ಆದಾಯದಲ್ಲಿನ ಹೆಚ್ಚಳವೂ ಷೇರು ಮಾರುಕಟ್ಟೆ ಏರುಗತಿಯಲ್ಲಿ ಸಾಗಲು ಕಾರಣವಾಯಿತು. ಇದೇ ವೇಳೆ, ಇದು ರೂಪಾಯಿ ಮೇಲೂ ಪರಿಣಾಮ ಬೀರಿದ್ದು, ಡಾಲರ್‌ ಎದುರು ರೂಪಾಯಿ ಮೌಲ್ಯವೂ 12 ಪೈಸೆಯಷ್ಟು ಏರಿಕೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next