ಮುಂಬಯಿ : ಭಾರತೀಯ ಶೇರು ಮಾರುಕಟ್ಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 9,700 ಅಂಕಗಳ ಗಡಿಯನ್ನು ದಾಟಿತು.
ಇದೇ ರೀತಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 121 ಅಂಕಗಳ ನೆಗೆತವನ್ನು ಕಂಡು ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವಾಗಿ 31,430.32 ಅಂಕಗಳ ಮಟ್ಟವನ್ನು ತಲುಪಿತು.
ಈ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ಕಂಡ ಬಳಿಕ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 0.67 ಅಂಕಗಳ ನಷ್ಟಕ್ಕೆ ಗುರಿಯಾಗಿ 1,308.82 ಅಂಕಗಳ ಮಟ್ಟಕ್ಕೆ ಇಳಿಯಿತು. ಇದೇ ವೇಳೆ ನಿಫ್ಟಿ ಕೂಡ 5.20 ಅಂಕಗಳ ನಷ್ಟಕ್ಕೆ ಗುರಿಯಗಿ 9,669.90 ಅಂಕಗಳ ಮಟ್ಟಕ್ಕೆ ಇಳಿಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಟಿಸಿಎಸ್, ಎಚ್‌ಸಿಎಲ್ ಟೆಕ್, ಎಸ್‌ಬಿಐ, ಇನ್‌ಫೋಸಿಸ್, ಎಸ್ ಬ್ಯಾಂಕ್ ಅತೀ ಹಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಎಚ್‌ಸಿಎಲ್ ಟೆಕ್, ಟಿಸಿಎಸ್, ಇನ್‌ಫೋಸಿಸ್, ಟೆಕ್ ಮಹೀಂದ್ರ ಮತ್ತು ಗೇಲ್ ದಾಖಲಾದವು. ಟಾಪ್ ಲೂಸರ್‌ಗಳಾಗಿ ಐಟಿಸಿ, ಒಎನ್‌ಜಿಸಿ, ಏಶ್ಯನ್ ಪೇಂಟ್, ಟಾಟಾ ಮೋಟರ್, ಪವರ್ ಗ್ರಿಡ್ ಕುಸಿತವನ್ನು ಕಂಡವು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿರುವ ಹೊರತಾಗಿಯೂ ನಾಳೆ ನಡೆಯಲಿರುವ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಆಶಾದಾಯಕವಾಗಿರುವುದೆಂಬ ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ತೇಜಿ ಕಂಡಿತು.