ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ 3.0 ಆಡಳಿತದಲ್ಲಿ ಭಾರತದ ಆರ್ಥಿಕ ಪ್ರಗತಿ ಅಭಿವೃದ್ಧಿ ಕಾಣಲಿದೆ ಎಂಬ ಬಗ್ಗೆ ಹೂಡಿಕೆದಾರರು ಆಶಾವಾದಿಗಳಾಗಿದ್ದ ಪರಿಣಾಮ ಬುಧವಾರ (ಜೂನ್ 12) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.
ಇದನ್ನೂ ಓದಿ:Andhra; ಸಿಎಂ ಆಗಿ ಚಂದ್ರ ಬಾಬು ನಾಯ್ಡು ಪ್ರಮಾಣವಚನ: ಪ್ರಧಾನಿ ಮೋದಿ ಆತ್ಮೀಯ ಅಪ್ಪುಗೆ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 524.83 ಅಂಕಗಳಷ್ಟು ಏರಿಕೆಯೊಂದಿಗೆ 76,981.42 ಅಂಕಗಳ ಮಟ್ಟ ತಲುಪಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 170 ಅಂಕಗಳ ಜಿಗಿತದೊಂದಿಗೆ ದಾಖಲೆಯ 23.441.95 ಅಂಕಗಳ ಗಡಿ ಮುಟ್ಟಿದೆ.
ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ ಹಾಗೂ ನಿಫ್ಟಿ ಫೈನಾಶ್ಶಿಯಲ್ಸ್ ಸುಮಾರು ಶೇ.8ರಷ್ಟು ಏರಿಕೆ ಕಂಡಿದೆ. ಕೋಲ್ ಇಂಡಿಯಾ, ಬಿಪಿಸಿಎಲ್, ಟಾಟಾ ಮೋಟಾರ್ಸ್, ಬಜಾಜ್ ಮೋಟಾರ್ಸ್ ಮತ್ತು ಎಲ್ ಟಿಐಎಂ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಬ್ರಿಟಾನಿಯಾ, ಟೈಟಾನ್, ಏಷಿಯನ್ ಪೇಂಟ್ಸ್, ಎಚ್ ಯುಎಲ್ ಹಾಗೂ ನೆಸ್ಲೆ ಇಂಡಿಯಾ ಷೇರುಗಳು ನಷ್ಟ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸ್ತುತ ಬೆಳವಣಿಗೆಯನ್ನು ಗಮನಿಸಿ ಹೂಡಿಕೆದಾರರು ಷೇರು ವಹಿವಾಟಿಗೆ ಒತ್ತು ನೀಡಿರುವುದಾಗಿ ವರದಿ ತಿಳಿಸಿದೆ.