ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಗುರುವಾರ (ನವೆಂಬರ್ 25) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 400ಕ್ಕೂ ಅಧಿಕ ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ; ಏನಿದರ ವಿಶೇಷತೆ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 454.10 ಅಂಕಗಳಷ್ಟು ಏರಿಕೆಯೊಂದಿಗೆ 58,795.09 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 121.30 ಅಂಕ ಏರಿಕೆಯೊಂದಿಗೆ 17,356.30 ಅಂಕಗಳ ಗಡಿ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್, ದಿವೀಸ್ ಲ್ಯಾಬ್ಸ್, ಇನ್ಫೋಸಿಸ್, ಐಟಿಸಿ ಮತ್ತು ಟೆಕ್ ಮಹೀಂದ್ರ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬ್ರಿಟಾನಿಯಾ ಇಂಡಸ್ಟ್ರೀಸ್, ಐಒಸಿ, ಇಂಡಸ್ ಇಂಡ್ ಬ್ಯಾಂಕ್, ಮಾರುತಿ ಸುಜುಕಿ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಇಂದು ಬೆಳಗ್ಗೆ ಅಲ್ಪ ಚೇತರಿಕೆಯೊಂದಿಗೆ ಮುಂಬಯಿ ಷೇರುಪೇಟೆ ವಹಿವಾಟು ಆರಂಭಗೊಂಡಿದ್ದರೂ ಕೂಡಾ ಬಳಿಕ ಸಂವೇದಿ ಸೂಚ್ಯಂಕ 125.54 ಅಂಕ ಇಳಿಕೆಯಾಗಿದ್ದು, 58,215.45 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 30.15 ಅಂಕ ಕುಸಿತವಾಗಿದ್ದು, 17,384.90 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು.