ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನ ಪರಿಣಾಮ ಬುಧವಾರ (ಏಪ್ರಿಲ್ 13) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 237 ಅಂಕ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಕೋಮುಪ್ರಚೋದಕ ಭಾಷಣ; ಎರಡು ಪ್ರಕರಣಗಳಲ್ಲಿ ಎಐಎಐಎಂನ ಅಕ್ಬರುದ್ದೀನ್ ಒವೈಸಿ ಖುಲಾಸೆ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 237.44 ಅಂಕ ಇಳಿಕೆಯಾಗಿದ್ದು, 58,338.93 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 54.60 ಅಂಕ ಕುಸಿತಗೊಂಡಿದ್ದು, 17,475.70 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಮಾರುತಿ ಸುಜುಕಿ, ಎಚ್ ಡಿಎಫ್ ಸಿ ಬ್ಯಾಂಕ್, ಟಾಟಾ ಮೋಟಾರ್ಸ್, ಡಾ.ರೆಡ್ಡೀಸ್ ಲ್ಯಾಬ್ಸ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಒಎನ್ ಜಿಸಿ, ಅಪೋಲೋ ಆಸ್ಪತ್ರೆ, ಐಟಿಸಿ. ಸನ್ ಫಾರ್ಮಾ ಮತ್ತು ಯುಪಿಎಲ್ ಷೇರುಗಳು ಲಾಭಗಳಿಸಿದೆ.
ಮಂಗಳವಾರ(ಏ.12) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 388.20 ಅಂಕ ಇಳಿಕೆಯಾಗಿದ್ದು, 58,586.37 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಅದೇ ರಿತಿ ಎನ್ ಎಸ್ ಇ ನಿಫ್ಟಿ 144.65 ಅಂಕಗಳಷ್ಟು ಕುಸಿತದೊಂದಿಗೆ 17,530.30 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು.