ಮುಂಬಯಿ: ಹಣಕಾಸು ವರ್ಷದ ಮೊದಲ ದಿನದ ಹಿನ್ನೆಲೆಯಲ್ಲಿ ಶುಕ್ರವಾರ (ಏಪ್ರಿಲ್ 01) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 700ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ವೈರಲ್ ಆಯ್ತು ಗೌತಮ್ ಗಂಭೀರ್- ಮಹೇಂದ್ರ ಸಿಂಗ್ ಧೋನಿ ಫೋಟೋ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 708.18 ಅಂಕಗಳಷ್ಟು ಏರಿಕೆಯಾಗಿದ್ದು, 59,276.69 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 205.70 ಅಂಕ ಏರಿಕೆಯಾಗಿದ್ದು, 17,670.50 ಅಂಕಗಳಲ್ಲಿ ವಹಿವಾಟು ಮುಕ್ತಾಯವಾಗಿದೆ.
ಎನ್ ಟಿಪಿಸಿ, ಬಿಪಿಸಿಎಲ್, ಪವರ್ ಗ್ರಿಡ್ ಕಾರ್ಪೋರೇಶನ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಎಸ್ ಬಿಐ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಹೀರೋ ಮೋಟೊ ಕಾರ್ಪ್, ಎಸ್ ಬಿಐ ಲೈಫ್ ಇನ್ಸೂರೆನ್ಸ್, ಸನ್ ಫಾರ್ಮಾ, ಟೆಕ್ ಮಹೀಂದ್ರ ಮತ್ತು ಟೈಟಾನ್ ಕಂಪನಿ ಷೇರುಗಳು ನಷ್ಟ ಕಂಡಿದೆ.
ಇಂದಿನ ವಹಿವಾಟಿನಲ್ಲಿ ಆಟೋ, ಬ್ಯಾಂಕ್, ತೈಲ ಮತ್ತು ಅನಿಲ, ಇಂಧನ ಮುತ್ತು ಪಿಎಸ್ ಯು ಬ್ಯಾಂಕ್ ಕ್ಷೇತ್ರಗಳ ಷೇರುಗಳು ಶೇ.1ರಿಂದ 4ರಷ್ಟು ಲಾಭಗಳಿಸಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಕಂಪನಿಯ ವಹಿವಾಟು ಗುರಿ 15,000 ಕೋಟಿ ಗಡಿ ತಲುಪಿದ ಹಿನ್ನೆಲೆಯಲ್ಲಿ ಬಿಇಎಲ್ ಷೇರು ಮೌಲ್ಯ ಶೇ.2ರಷ್ಟು ಹೆಚ್ಚಳವಾಗಿದೆ.