ಮುಂಬಯಿ: ಆರಂಭಿಕ ವಹಿವಾಟಿನಲ್ಲಿ ಸುಮಾರು 130 ಅಂಕಗಳಷ್ಟು ಕುಸಿತ ಕಂಡಿದ್ದ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ (ಮಾರ್ಚ್ 28) 231 ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಮಹಾರಾಷ್ಟ್ರದ ನಾಸಿಕ್ ಅಂಗಡಿಯೊಂದರಲ್ಲಿ ಮನುಷ್ಯನ ಮೆದುಳು, ಕಣ್ಣು, ಕಿವಿಯ ಭಾಗ ಪತ್ತೆ!
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 231.29 ಅಂಕ ಏರಿಕೆಯಾಗಿದ್ದು, 57,593 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 69 ಅಂಕಗಳಷ್ಟು ಏರಿಕೆಯೊಂದಿಗೆ 17,222 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಭಾರ್ತಿ ಏರ್ ಟೆಲ್, ಕೋಲ್ ಇಂಡಿಯಾ, ಆ್ಯಕ್ಸಿಸ್ ಬ್ಯಾಂಕ್, ಈಚರ್ ಮೋಟಾರ್ಸ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಯುಪಿಎಲ್, ಎಸ್ ಬಿಐ ಲೈಫ್ ಇನ್ಸೂರೆನ್ಸ್, ನೆಸ್ಲಿ ಇಂಡಿಯಾ, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಮತ್ತು ಎಚ್ ಡಿಫ್ ಸಿ ಷೇರುಗಳು ನಷ್ಟ ಕಂಡಿದೆ.
ಬ್ಯಾಂಕ್ ಹಾಗೂ ತೈಲ ಮತ್ತು ಅನಿಲ ಕ್ಷೇತ್ರಗಳ ಷೇರುಗಳು ಲಾಭಗಳಿಸಿದ್ದು, ಆಟೋ, ಮೆಟಲ್ ಕಂಪನಿಗಳ ಷೇರುಗಳು 0.5ರಷ್ಟು ಲಾಭಕಂಡಿದೆ. ಮಂಗಳವಾರ (ಮಾರ್ಚ್ 29) ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಆಟೋ, ಬಜಾಜ್ ಫೈನಾನ್ಸ್, ಭಾರ್ತಿ ಏರ್ ಟೆಲ್, ಸಿಪ್ಲಾ, ಕೋಲ್ ಇಂಡಿಯಾ ಷೇರುಗಳನ್ನು ಖರೀದಿಸಬಹುದಾಗಿದೆ ಎಂಬುದು ಮಾರುಕಟ್ಟೆ ವಿಶ್ಲೇಷಣೆಯಾಗಿದೆ.