ಮುಂಬಯಿ : ದಿನದ ವಹಿವಾಟಿನ ಕೊನೇ ತಾಸಿನಲ್ಲಿ ಕಂಡು ಬಂದ ತೇಜಿಯ ಪರಿಣಾಮವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,000 ಅಂಕಗಳನ್ನು ದಾಟಿ ದಿನಾಂತ್ಯದ ಮೊತ್ತ ಮೊದಲ ಗರಿಷ್ಠ ಎತ್ತರವಾಗಿ 10,020.65 ಅಂಕಗಳನ್ನು (+56.15) ತಲುಪಿದ ಸಾಧನೆ ಮಾಡಿದುದು ಇಂದು ಗುರುವಾರದ ವಹಿವಾಟಿನ ಮುಖ್ಯಾಂಶವೆನಿಸಿತು.
ಇದೇ ವೇಳೆ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 154.19 ಅಂಕಗಳ ಮುನ್ನಡೆಯನ್ನು ಕಂಡು ದಿನದ ವಹಿವಾಟನ್ನು 32,382.46 ಅಂಕಗಳ ಸಾರ್ವಕಾಲಿಕ ದಾಖಲೆಯ ಎತ್ತರದ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,349 ಶೇರುಗಳು ಮುನ್ನಡೆ ಸಾಧಿಸಿದರೆ 1,332 ಶೇರುಗಳು ಹಿನ್ನಡೆಗೆ ಗುರಿಯಾದವು. 176 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳು.
ಟಾಪ್ ಗೇನರ್‌ಗಳು : ಎಸ್ ಬ್ಯಾಂಕ್, ವೇದಾಂತ, ಇಂಡಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ, ಟಾಟಾ ಸ್ಟೀಲ್. ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಎಕ್ಸಿಸ್ ಬ್ಯಾಂಕ್, ಝೀ ಎಂಟರ್‌ಟೇನ್‌ಮೆಂಟ್, ಏಶ್ಯನ್ ಪೇಂಟ್, ಎಸಿಸಿ.