Advertisement

ಕೇರಳದಲ್ಲಿ ನಿಫಾ ಭೀತಿ: ಮುನ್ನೆಚ್ಚರಿಕೆ ಕ್ರಮ

11:15 PM Jun 03, 2019 | Team Udayavani |

ಕೊಚ್ಚಿ: ಮಾರಣಾಂತಿಕ ನಿಫಾ ಸೋಂಕಿನ ಲಕ್ಷಗಳು ಕೊಚ್ಚಿಯ ಕಾಲೇಜು ವಿದ್ಯಾರ್ಥಿಯೊಬ್ಬನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇರಳ ಸರಕಾರ ಎಚ್ಚೆತ್ತು ಕೊಂಡಿದ್ದು, ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷ 17 ಮಂದಿಯನ್ನು ಬಲಿ ತೆಗೆದುಕೊಂಡ ವೈರಸ್‌ ಈಗ ಮತ್ತೆ ಕಾಣಿಸಿಕೊಂಡ ಅನುಮಾನ ಮೂಡಿರುವ ಕಾರಣ, ಅದನ್ನು ನಿಯಂತ್ರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

23 ವರ್ಷದ ಕಾಲೇಜು ವಿದ್ಯಾರ್ಥಿಯಲ್ಲಿ ನಿಫಾ ಲಕ್ಷಣ ಕಂಡುಬಂದಿದ್ದು, ಆತನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ಅನಂತರವಷ್ಟೇ ಅದು ನಿಫಾ ಸೋಂಕು ಹೌದೋ, ಅಲ್ಲವೋ ಎಂಬುದು ದೃಢವಾಗಲಿದೆ. ಆದರೂ, ಕೊಚ್ಚಿಯ ಕಲಮಶೆÏàರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಗಳನ್ನು ತೆರೆಯಲಾಗಿದೆ. ಉನ್ನತ ಆರೋಗ್ಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಯನ್ನೂ ಕರೆಯಲಾಗಿದೆ. ಸೋಂಕು ತಗುಲಿದೆ ಎನ್ನಲಾದ ವಿದ್ಯಾರ್ಥಿ ಜತೆಗೆ ಸಂಪರ್ಕದಲ್ಲಿದ್ದ 86 ಮಂದಿಯ ಪಟ್ಟಿ ತಯಾರಿಸಲಾಗಿದ್ದು, ಅವರ ಮೇಲೂ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next