Advertisement

ನಿಫಾ ತಪಾಸಣೆ: 2,000 ಮಂದಿ ಮೇಲೆ ನಿಗಾ

07:56 AM Jun 04, 2018 | Team Udayavani |

ಉಡುಪಿ: ಕೇರಳದ ಕಲ್ಲಿಕೋಟೆ ಮತ್ತು ಮಲಪ್ಪುರಂಗಳಲ್ಲಿ ಸುಮಾರು 2,000 ಮಂದಿಯ ಮೇಲೆ ನಿಫಾ ವೈರಸ್‌ ಸೋಂಕಿನ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಕೇರಳ ಸರಕಾರದ ಜತೆ ನಿಫಾ ನಿಯಂತ್ರಣ ಕಾರ್ಯಾಚರಣೆಯಲ್ಲಿ ತೊಡಗಿರುವ ಮಣಿಪಾಲ ಸೆಂಟರ್‌ ಫಾರ್‌ ವೈರಸ್‌ ರಿಸರ್ಚ್‌ (ಎಂಸಿವಿಆರ್‌)ನ ಮುಖ್ಯಸ್ಥ ಡಾ| ಜಿ. ಅರುಣ್‌ ಕುಮಾರ್‌ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಈ ಎರಡು ಸಾವಿರ ಮಂದಿಯಲ್ಲಿ ಕಲ್ಲಿಕೋಟೆಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗೆ ಈ ಹಿಂದೆ ನಿಫಾ ಪ್ರಕರಣದ ಆರಂಭಿಕ ಹಂತದಲ್ಲಿ ಭೇಟಿ ನೀಡಿದ ಹೆಚ್ಚಿನವರು ಸೇರಿದ್ದಾರೆ. ಇವರಲ್ಲದೆ ನಿಫಾ ಸೋಂಕು ತಗಲಿದ ಪರಿಸರದ ಜನರು ಕೂಡ ಇದ್ದಾರೆ. ಸೋಂಕನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದಕ್ಕಾಗಿ ಈ ಎಲ್ಲ ಮಂದಿಯ ಮೇಲೆ ತೀವ್ರ ನಿಗಾ ಇರಿಸಲಾಗುತ್ತಿದೆ ಎಂದವರು ವಿವರಿಸಿದರು.

ಇಷ್ಟು ಮಂದಿಯನ್ನು ಪ್ರತಿನಿತ್ಯ ತಪಾಸಣೆ ಮಾಡಲಾಗುತ್ತಿದೆ. ಇದು ವರೆಗೆ ಇವರಲ್ಲಿ ಸೋಂಕಿನ ಯಾವುದೇ ಲಕ್ಷಣ ಕಂಡುಬಂದಿಲ್ಲ. ಒಂದು ವೇಳೆ ಅವರಲ್ಲಿ ಜ್ವರದಂತಹ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಹಾಗೆಂದು ಅವರ ಓಡಾಟಕ್ಕೆ ಯಾವುದೇ ನಿಯಂತ್ರಣ ಹೇರಿಲ್ಲ ಎಂದಿದ್ದಾರೆ.

ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಪ್ರಸ್ತುತ ಇಬ್ಬರು ಚಿಕಿತ್ಸೆಯಲ್ಲಿದ್ದು, ಅವರು ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next