Advertisement
ಸುಮಾರು 76 ವರ್ಷಗಳ ಹಳೆ ಸೇತುವೆ ಸಂಪೂರ್ಣ ಶಿಥಿಲ ಗೊಂಡಿದ್ದು, ಸೇತುವೆ ಮೇಲಿನ ರಸ್ತೆಯ ಡಾಮರು ಕಿತ್ತು ಹೋಗಿ, ವಾಹನ ಸಂಚಾರಕ್ಕೆ ತೀವ್ರ ತೊಡ ಕಾಗುತ್ತಿದೆ. ಶಿರಾಡಿ ಘಾಟಿ ರಸ್ತೆಯ ಕಾಮಗಾರಿ ನಡೆಯುತ್ತಿರುವ ಕಾರಣ ಎಲ್ಲ ವಾಹನಗಳು ಚಾರ್ಮಾಡಿ ರಸ್ತೆಯನ್ನೇ ಅವಲಂಬಿಸಿದ್ದು, ಅಗಲ ಕಿರಿದಾಗಿರುವ ನಿಡಿಗಲ್ ಸೇತುವೆ ಮೇಲೆ ದಿನಂಪ್ರತಿ ಬ್ಲಾಕ್ ಆಗುತ್ತಿದೆ. ಸೇತುವೆ ಬದಿಯ ತಡೆಬೇಲಿಯೂ ತುಂಡಾಗಿರುವ ಕಾರಣ ಅಪಾಯ ಆಹ್ವಾನಿಸುತ್ತಿದೆ. ಸೇತುವೆ ಮೇಲಿನ ಗುಂಡಿಗೆ ತೇಪೆ ಕಾರ್ಯ ನಡೆಸಲಾಗಿದೆ.
ಬೆಂಗಳೂರು ಸಹಿತ ಹಲವು ಜಿಲ್ಲೆಗಳಿಂದ ಧರ್ಮಸ್ಥಳ, ಕಟೀಲು, ಉಡುಪಿ ಇತ್ಯಾದಿ ಕ್ಷೇತ್ರಗಳಿಗೆ ಆಗಮಿಸುವ ಯಾತ್ರಿಕರಿಗೆ ನಿಡಿಗಲ್ ಸೇತುವೆ ಪ್ರಮುಖ ಕೊಂಡಿಯಾಗಿದ್ದು, ಇದು ಹಲವು ದಶಕಗಳ ಹಿಂದಿನ ನಿರ್ಮಾಣವಾಗಿದ್ದರಿಂದ ಕುಸಿತ ಭೀತಿ ಪ್ರಯಾಣಿಕರನ್ನು ಕಾಡುತಿತ್ತು. 19 ಕೋ.ರೂ. ಮಂಜೂರು
ಬಂಟ್ವಾಳ- ಚಾರ್ಮಾಡಿ ರಾ.ಹೆ.ಯ ಮಣಿಹಳ್ಳ, ನಿಡಿಗಲ್ ಮತ್ತು ಚಾರ್ಮಾಡಿಯ 3 ಸೇತುವೆ ನಿರ್ಮಾಣಕ್ಕೆ 19 ಕೋ.ರೂ. ಅನುದಾನ ಮಂಜೂರುಗೊಂಡಿದ್ದು, ನಿಡಿಗಲ್ ಸೇತುವೆ ಕಾಮಗಾರಿಗೆ ಚಾಲನೆ ದೊರಕಿದೆ.
Related Articles
ಉದಯವಾಣಿ ಪತ್ರಿಕೆ ಹಲವು ವರ್ಷಗಳಿಂದ ಸರಕಾರದ ಗಮನ ಸೆಳೆದಿತ್ತು. ಶಾಸಕರು ಅನೇಕ ಬಾರಿ ಈ ಸೇತುವೆ ರಚನೆಗೆ ಅನುದಾನ ಒದಗಿಸುವಂತೆ ಮನವಿ ಮಾಡಿದ್ದರು. ಈಗ ಕೊನೆಗೂ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಅನುದಾನ ಮಂಜೂರುಗೊಂಡು ಕಾಮಗಾರಿಗೆ ಚಾಲನೆ ದೊರಕಿದೆ. ಮರಗೋಡಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆ ಇದರ ಗುತ್ತಿಗೆ ವಹಿಸಿಕೊಂಡಿದ್ದು, ಮಳೆಗಾಲ ಹೊರತುಪಡಿಸಿ 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.
Advertisement
ಗುರು ಮುಂಡಾಜೆ