Advertisement

ನಿಡಿಗಲ್‌ ಕ್ಷೇತ್ರ : ಸಿರಿ ಜಾತ್ರೆ

02:34 PM Mar 31, 2018 | Team Udayavani |

ಬೆಳ್ತಂಗಡಿ: ನಿಡಿಗಲ್‌ ಲೋಕನಾಡು ಶ್ರೀ ಲೋಕನಾಥೇಶ್ವರ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಹಾಗೂ ಸಿರಿ ಜಾತ್ರೆ, ಶ್ರೀ ನಾಗದರ್ಶನ, ಆಶ್ಲೇಷಾ ಬಲಿ, ದೈವಗಳ ನೇಮ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

Advertisement

ಗುರುವಾರ ಬೆಳಗ್ಗೆ ವೈದಿಕ ಕಾರ್ಯ ಕ್ರಮ, ಹೊರೆಕಾಣಿಕೆ ಸಮರ್ಪಣೆ, ಧ್ವಜಾರೋಹಣ, ಮಹಾಪೂಜೆ, ಶ್ರೀ ದೇವರ ಬಲಿ, ರಾತ್ರಿ ದೇವರ ಉತ್ಸವ, ದೀಪಾರಾಧನೆ, ಭೂತರಾಜ ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮ ನಡೆಯಿತು.ಶುಕ್ರವಾರ ಬೆಳಗ್ಗೆ ವೈದಿಕ ಕಾರ್ಯ ಕ್ರಮ, ಸಂಜೆ ಭಜನ್‌ ಸಂಕೀರ್ತನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಫಲ್ಗುಣಿ ಕಲಾ ತಂಡ ವೇಣೂರು ಇವರಿಂದ ‘ಸೇವಂತಿಗ್‌ ಮದಿಮೆಗೆ’ ನಾಟಕ ಪ್ರದರ್ಶನಗೊಂಡಿತು.

ರಾತ್ರಿ ಕುಮಾರ ದರ್ಶನ, ಶ್ರೀ ದೇವರ ಉತ್ಸವ, ವಸಂತಕಟ್ಟೆ ಪೂಜೆ, ಶ್ರೀ ಅಬ್ಬಗ ದಾರಗರ ಚೆನ್ನೆಮಣೆ ಆಟ, ಮೂಲ ಮಹಿಷಂತಾಯ, ರಕ್ತೇಶ್ವರಿ, ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿ ದೈವಗಳಿಗೆ ನೇಮ, ಕುಮಾರ ಮತ್ತು ಪಂಜುರ್ಲಿ ದೈವದ ಭೇಟಿ ನಡೆಯಿತು. ಲೋಕನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು, ಭಕ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next