Advertisement

ಮಸೂತಿ: ಗಮನ ಸೆಳೆದ ನಲಿ-ಕಲಿ ಮೇಳ

01:32 PM Feb 10, 2020 | Naveen |

ನಿಡಗುಂದಿ: ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ತಾಲೂಕಿನ ಮಸೂತಿ ಗ್ರಾಮದಲ್ಲಿ ನಲಿಕಲಿ ಕಲಿಕಾ ಮೇಳ ಜರುಗಿತು.

Advertisement

ನಾನಾ ಕಲಿಕಾ ಸಾಮಗ್ರಿಗಳು, ವಿವಿಧ ಪಾಠ ಬೋಧನಾ ವಿಧಾನಗಳ ಪ್ರದರ್ಶನ, ಕಂಠಪಾಠ ಮುಕ್ತ ಚಟುವಟಿಕೆ, ಸ್ವತಂತ್ರ ಆಲೋಚನೆ, ಸೃಜನಾತ್ಮಕತೆ ಬೆಳೆಸುವ ಚಟವಟಿಕೆಗಳು ಗಮನ ಸೆಳೆದವು.

ಬಳಬಟ್ಟಿ ಕ್ಲಸ್ಟರ್‌ ವ್ಯಾಪ್ತಿಯ 6 ಶಾಲೆಗಳಿಂದ ಎರಡುನೂರು ವಿದ್ಯಾರ್ಥಿಗಳು ಹಾಗೂ 15ಜನ ನಲಿ ಕಲಿ ಶಿಕ್ಷಕರು ನಲಿ ಕಲಿ ವಿಷಯಕ್ಕೆ ಸಂಬಂಧಪಟ್ಟ ಸುಮಾರು ನೂರು ಪರಿಕಲ್ಪನೆಯ ಮೇಲೆ ಕಲಿಕಾ ಸಾಮಗ್ರಿಗಳನ್ನು ತಯಾರಿಸಿ ವಿದ್ಯಾರ್ಥಿಗಳು ಅವುಗಳ ಬಗ್ಗೆ ವಿವರಣೆ ನೀಡಿದರು.

ಮೇಳಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಮಾತನಾಡಿ, ಮಕ್ಕಳಲ್ಲಿ ಅನುಭಾವಾತ್ಮಕ ಕಲಿಕೆ ಪ್ರೇರೇಪಿಸಲು ನಲಿ ಕಲಿ ಸಹಕಾರಿ. ಯೋಜನೆಯಿಂದ ಕಲಿಕೆ ಸಾಮರ್ಥ್ಯ ಹೆಚ್ಚಿಸಬಹುದು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಗೌಡರ ಮಾತನಾಡಿ, ಶಿಕ್ಷಣ ನಿಂತ ನೀರಾಗದೇ ಸದಾ ಚಲನೆಯ ಸ್ಥಿತಿಯಲ್ಲಿರಬೇಕು, ಅದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುವ ಭಾಷಾ ಬೋಧನೆ, ನಲಿ ಕಲಿ ಮೇಳ, ವಿಜ್ಞಾನ ಮೇಳ, ಮೆಟ್ರಿಕ್‌ ಮೇಳ, ಸಮಾಜ ವಿಜ್ಞಾನ ಮೇಳ, ಭೂಗೋಳ ಮೇಳ ಸೇರಿದಂತೆ ಹಲವು ಶೈಕ್ಷಣಿಕ ಹಬ್ಬಗಳು ಪೂರಕವಾಗಿವೆ ಎಂದರು.

Advertisement

ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲಬುರ್ಗಿ ಮಾತನಾಡಿ, ಶಿಕ್ಷಕರು ಮಕ್ಕಳ ಮೇಲೆ ತೀವ್ರ ಪ್ರಭಾವ ಬೀರುವ ವ್ಯಕ್ತಿಗಳಾಗಿದ್ದಾರೆ. ಪಾಠದ ಶೈಲಿ, ಕಲಿಕಾ ವಿಧಾನ, ಆಚಾರ ವಿಚಾರ ತಿಳಿಸುವ ಕೆಲಸ ಶಿಕ್ಷಕರಿಂದ ಸರಿಯಾಗಿ ಆದರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ನಾಗರಿಕರಾಗಿ ರೂಪುಗೊಳ್ಳುತ್ತಾರೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ಪಿ.ಜಿ. ಬಲಕುಂದಿ, ಸುರೇಶ ಆಲೂರ, ಈರಣ್ಣ, ಸಂಗಣ್ಣ ಹುಲ್ಲಳ್ಳಿ, ಎಂ.ಕೆ. ಮುತ್ತಣ್ಣವರ, ಸೋಮನಗೌಡ ಪಾಟೀಲ, ನೌಕರ ಸಂಘಟನೆ ಮುಖಂಡರಾದ ಎಂ.ಬಿ. ರಕರಡ್ಡಿ, ವಿ.ಕೆ. ಮಸೂತಿ, ಆರ್‌.ಎ. ನದಾಫ್‌, ಎಸ್‌.ಎಚ್‌. ದಡೆದ, ಆರ್‌.ಬಿ. ಗೌಡರ, ಎಚ್‌.ಎಚ್‌. ದೊಡಮನಿ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಸಂಪನ್ಮೂಲ ವ್ಯಕ್ತಿಗಳು ಇದ್ದರು.

ವೈ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಪಿ.ಎಂ. ಕಡೂರ ಸ್ವಾಗತಿಸಿದರು. ಬಸಮ್ಮ ಪೂಜಾರಿ ನಿರೂಪಿಸಿದರು. ಪರಶುರಾಮ ಬಲಕುಂದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next