Advertisement

Nice Road Movie: ನೈಟ್‌ ರೋಡ್‌ ಸೆ.27ಕ್ಕೆ  ಬಿಡುಗಡೆ

04:10 PM Sep 24, 2024 | Team Udayavani |

“ನೈಸ್‌ ರೋಡ್‌’ ಎಂಬ ಚಿತ್ರ ಈಗ ಟೈಟಲ್‌ ಬದಲಿಸಿ ನೈಟ್‌ ರೋಡ್‌ ಆಗಿರುವುದು ನಿಮಗೆ ಗೊತ್ತೇ ಇದೆ. ಈ ಚಿತ್ರ ಸದ್ಯ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸೆ.27ರಂದು ತೆರೆಕಾಣುತ್ತಿದೆ.

Advertisement

ಅಪಘಾತದಿಂದ ಮೃತಪಟ್ಟ ಯುವಕನ ಅಸಹಜ ಸಾವಿನ ತನಿಖೆಗೆ ಮುಂದಾಗುವ ನಾಯಕ ಆಧ್ಯಾತ್ಮದತ್ತ ವಾಲುತ್ತಾನೆ. ಹೀಗೆ ತಿರುವು ಪಡೆಯುವ ಚಿತ್ರದ ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರ ಹೃದಯ ಬಡಿತವನ್ನು ಹೆಚ್ಚಿಸುವ ಜೊತೆಗೆ ಯೋಚನೆಗೆ ಹಚ್ಚುತ್ತದೆ. ಕ್ಲೈಮ್ಯಾಕ್ಸ್‌ ವೇಳೆಗಂತೂ ನೋಡುಗರನ್ನು ತನ್ನಲ್ಲಿ ಆವಾಹನೆ ಮಾಡಿಕೊಂಡಿರುತ್ತದೆ ಎನ್ನುತ್ತದೆ ಚಿತ್ರತಂಡ.

ಗೋಪಾಲ್‌ ಹಳೇಪಾಳ್ಯ ಈ ಚಿತ್ರದ ನಿರ್ದೇಶಕರು.  ಈ ಹಿಂದೆ ಗೋಪಾಲ್‌ ಹಳೇಪಾಳ್ಯ “ತಾಂಡವ’ ಚಿತ್ರವನ್ನು ನಿರ್ದೇಶಿಸಿದ್ದರು. ಕಳೆದ 15ವರ್ಷಗಳಿಂದ ಸಿನೆಮಾ ರಂಗದಲ್ಲಿ ಬರವಣಿಗೆ ಸೇರಿದಂತೆ ನಿರ್ದೇಶನದ ವಿಭಾಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದೀಗ, ತಮ್ಮ 2ನೇ ಚಿತ್ರವನ್ನು ಪುನರ್‌ ಗೀತಾ ಸಿನಿಮಾಸ್‌ ಬ್ಯಾನರ್‌ ಅಡಿಯಲ್ಲಿ ಗೋಪಾಲ್‌ ಹಳೇಪಾಳ್ಯ ಅವರೇ ನಿರ್ಮಾಣ ಮಾಡುವ ಜೊತೆಗೆ ನಿರ್ದೇಶನ ಮಾಡಿದ್ದಾರೆ.

ತಾರಾಗಣದಲ್ಲಿ ಧರ್ಮ, ಜ್ಯೋತಿ ರೈ, ಗಿರಿಜಾ ಲೋಕೇಶ್‌, ಗೋವಿಂದೇಗೌಡ, ರವಿಕಿಶೋರ್‌, ಸಚ್ಚಿ, ಮಂಜು ಮೈಸೂರು, ಪ್ರಭು, ರೇಣು ಶಿಕಾರಿ, ಸುರೇಖಾ ಇದ್ದಾರೆ. ಸತೀಶ್‌ ಆರ್ಯನ್‌ ಸಂಗೀತ, ಪ್ರವೀಣ್‌ ಶೆಟ್ಟಿ ಛಾಯಾಗ್ರಹಣ, ಜೀವನ್‌ ಪ್ರಕಾಶ್‌ ಸಂಕಲನ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next