Advertisement

ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

10:27 PM Sep 12, 2022 | Team Udayavani |

ನವದೆಹಲಿ: ಉಗ್ರರು, ದರೋಡೆಕೋರರು ಮತ್ತು ಮಾದಕದ್ರವ್ಯ ಕಳ್ಳಸಾಗಣೆದಾರರ ನಡುವಿನ ಜಾಲ ನಾಶಪಡಿಸುವ ನಿಟ್ಟಿನಲ್ಲಿ ದೆಹಲಿ ಸೇರಿದಂತೆ ದೇಶದ 50 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಳಿ ನಡೆಸಿದೆ.

Advertisement

ದೇಶ ಮತ್ತು ವಿದೇಶಗಳಲ್ಲಿ ನೆಲೆಸಿದ್ದು, ಭಯೋತ್ಪಾದನೆ ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಗ್ಯಾಂಗ್‌ಸ್ಟರ್‌ಗಳಿಗೆ ಸೇರಿದ ಜಾಗಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ.

ಪಂಜಾಬ್‌, ಹರ್ಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು, 6 ಬಂದೂಕುಗಳು, ಒಂದು ರಿವಾಲ್ವರ್‌, ಒಂದು ಶಾಟ್‌ಗನ್‌, ಮಾದಕದ್ರವ್ಯ, ನಗದು, ಡಿಜಿಟಲ್‌ ಉಪಕರಣಗಳು, ಬೇನಾಮಿ ಆಸ್ತಿ ಪತ್ರಗಳು ಮತ್ತು ಬೆದರಿಕೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next