Advertisement

ISIS Network Case:ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಎನ್‌ ಐಎ ದಾಳಿ; ದಾಖಲೆಗಳು ವಶಕ್ಕೆ

01:19 PM Dec 18, 2023 | Team Udayavani |

ನವದೆಹಲಿ: ಐಸಿಸ್‌ ಜಾಲದ ಜೊತೆ ಸಂಪರ್ಕ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ ನಿಗ್ರಹ ಏಜೆನ್ಸಿ ಎನ್‌ ಐಎ (ರಾಷ್ಟ್ರೀಯ ತನಿಖಾ ದಳ) ಸೋಮವಾರ (ಡಿಸೆಂಬರ್‌ 18) ಕರ್ನಾಟಕದ ಬೆಂಗಳೂರು, ಬಳ್ಳಾರಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Mysore Airport: ಟಿಪ್ಪು ನಮ್ಮ ಊರಿನವರೇ ಅಲ್ವಾ? ಅವರೇನೂ ಹೊರ ದೇಶದವರಾ…? ಸಚಿವ ಮಹದೇವಪ್ಪ

ಕರ್ನಾಟಕದ 11 ಸ್ಥಳಗಳಲ್ಲಿ, ಜಾರ್ಖಂಡ್‌ ನ ನಾಲ್ಕು, ಮಹಾರಾಷ್ಟ್ರದ ಮೂರು ಹಾಗೂ ದೆಹಲಿಯಲ್ಲಿ ಒಂದು ಸ್ಥಳ ಸೇರಿದಂತೆ ಒಟ್ಟು 19 ಕಡೆಗಳಲ್ಲಿ ಎನ್‌ ಐಎ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಕಳೆದ ವಾರ ಭಯೋತ್ಪಾದಕ ನಿಗ್ರಹ ಏಜೆನ್ಸಿ ಮಹಾರಾಷ್ಟ್ರದಲ್ಲಿ 40ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿ, 15 ಮಂದಿಯನ್ನು ಬಂಧಿಸಿತ್ತು. ಬಂಧಿತ ಆರೋಪಿಗಳಲ್ಲಿ ಒಬ್ಬ ಐಸಿಸ್‌ ಸಂಪರ್ಕ ಜಾಲದ ನಾಯಕನಾಗಿದ್ದು, ಹೊಸದಾಗಿ ಸೇರ್ಪಡೆಗೊಂಡವರಿಗೆ ಈತ ಪ್ರಮಾಣವಚನ ಬೋಧಿಸುತ್ತಿದ್ದ ಎಂದು ಮೂಲಗಳು ವಿವರಿಸಿವೆ.

ಎನ್‌ ಐಎ ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಶಸ್ತ್ರಾಸ್ತ್ರ, ಸೂಕ್ಷ್ಮ ದಾಖಲೆಗಳು ಮತ್ತು ವಿವಿಧ ಡಿಜಿಟಲ್‌ ಡಿವೈಸ್‌ ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ವಿದೇಶಿ ಹ್ಯಾಂಡ್ಲರ್‌ ಗಳ ಸೂಚನೆಯಂತೆ ಭಾರತದಲ್ಲಿ ಐಸಿಸ್‌ ಸಂಪರ್ಕ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next