Advertisement

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕರ ನಿವಾಸಗಳ ಮೇಲೆ ಎನ್‌ಐಎ ದಾಳಿ

06:06 AM Feb 26, 2019 | udayavani editorial |

ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕರಾಗಿರುವ ಮೀರ್‌ ವೇಜ್‌ ಉಮರ್‌ ಫಾರೂಕ್‌, ಯಾಸೀನ್‌ ಮಲಿಕ್‌, ಶಬ್ಬೀರ್‌ ಶಾ, ಅಶ್ರಫ್ ಸೆಹರಾಯ್‌ ಮತ್ತು ಝಫ‌ರ್‌ ಭಟ್‌ ಮೊದಲಾದವರ ನಿವಾಸಗಳ ಮೇಲೆ ದಾಳಿ ನಡೆಸಿದೆ. 

Advertisement

ಪಾಕ್‌ ಪರ ಪ್ರತ್ಯೇಕತಾವಾದಿ ನಾಯಕ ಸಯ್ಯದ್‌ ಅಲಿ ಶಾ ಗೀಲಾನಿ ಅವರ ಪುತ್ರನಾಗಿರುವ ನಯೀಮ್‌ ಗೀಲಾನಿ ಮನೆ ಮೇಲೂ ಎನ್‌ಐಎ ದಾಳಿ ನಡೆಸಿರುವುದಾಗಿ ವರದಿಳು ತಿಳಿಸಿವೆ. 

ಈ ಪ್ರತ್ಯೇಕತವಾದಿ ನಾಯಕರಿಗೆ ಹವಾಲಾ ಮಾರ್ಗದ ಮೂಲಕ ಪಾಕಿಸ್ಥಾನದಿಂದ ಹಣ ಪೂರೈಕೆ ಆಗುತ್ತಿದ್ದು ಅದರ ಜಾಡನ್ನು ಅರಸಿಕೊಂಡು ಎನ್‌ಐಎ ಈ ವ್ಯಾಪಕ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next