Advertisement

ಹುರಿಯತ್‌ ಕಾನ್ಫರೆನ್ಸ್‌ ಕಚೇರಿಯನ್ನು ಮುಟ್ಟುಗೋಲು ಹಾಕಿದ ಎನ್‌ಐಎ

09:40 PM Jan 29, 2023 | Team Udayavani |

ನವದೆಹಲಿ : ಉಗ್ರ ಹಣಕಾಸು ನೆರವು ಪ್ರಕರಣ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್‌ ಆದೇಶದ ಮೇರೆಗೆ, ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್ಸ್‌ ಸಂಘಟನೆಯ ಶ್ರೀನಗರದಲ್ಲಿರುವ ಕಚೇರಿಯನ್ನು ರಾಷ್ಟ್ರೀಯಾ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಭಾನುವಾರ ಮುಟ್ಟುಗೋಲು ಹಾಕಿದ್ದಾರೆ.

Advertisement

ಕಚೇರಿಯ ಹೊರಗಡೆ ಗೋಡೆಗೆ ಅಧಿಕಾರಿಗಳು ನೋಟಿಸ್‌ ಅಂಟಿಸಿದ್ದು, ಅದರಲ್ಲಿ ಪ್ರಸಕ್ತ ವಿಚಾರಣೆ ಎದುರಿಸುತ್ತಿರುವ ಹುರಿಯತ್‌ನ ನಾಯಕರಾದ ನಯೀಮ್‌ ಹಾಗೂ ಅಹ್ಮದ್‌ ಖಾನ್‌ ಒಡೆತನದ ಈ ಕಟ್ಟಡವನ್ನು ಜಪ್ತಿ ಮಾಡಲಾಗಿದೆ. ನವದೆಹಲಿಯ ಪಟಿಯಾಲಾ ಹೌಸ್‌, ಎನ್‌ಐಎ ವಿಶೇಷ ನ್ಯಾಯಾಲಯ 2023ರ ಜ.27ರಂದು ಹೊರಡಿಸಿರುವ ಆದೇಶಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳವುದಾಗಿ ಸೂಚಿಸಿದೆ.

26 ಪ್ರತ್ಯೇಕವಾದಿ ಸಂಘಟನೆಗಳ ಒಕ್ಕೂಟ ಸಂಘಟನೆಯಾಗಿರುವ ಹುರಿಯತ್‌, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದೆ ಎನ್ನುವ ಆರೋಪವಿದ್ದು, 2019ರಿಂದ ಈ ಕಚೇರಿಯನ್ನು ಮುಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next