ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಮೇಲೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಭಾನುವಾರ ಭಯೋತ್ಪಾದಕ ಸಂಚು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಾಸಿಹ್-ಎ-ಮೊಹಮ್ಮದ್ (ಜೆಇಎಂ) ಕಾರ್ಯಕರ್ತನನ್ನು ಬಂಧಿಸಿದೆ.
ಎನ್ ಐಎ ಪ್ರಕಾರ, ಕುಪ್ವಾರ ಜಿಲ್ಲೆಯ ಮೊಹಮ್ಮದ್ ಉಬೈದ್ ಮಲಿಕ್ ಪಾಕಿಸ್ತಾನ ಮೂಲದ ಜೆಎಂ ಕಮಾಂಡರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ.
ತನಿಖೆಯಲ್ಲಿ, ಆರೋಪಿಯು ಉಗ್ರಗಾಮಿ ಸಂಘಟನೆಯ ಕಮಾಂಡರ್ ಗೆ ಸೈನಿಕರು ಮತ್ತು ಭದ್ರತಾ ಪಡೆಗಳ ಚಲನವಲನ ಸೇರಿದಂತೆ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.
ಕಣಿವೆ ಪ್ರದೇಶದಲ್ಲಿನ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಸೂಚಿಸುವ ವಿವಿಧ ದಾಖಲೆಗಳನ್ನು ಎನ್ ಐಎ ವಶಪಡಿಸಿಕೊಂಡಿದೆ.
ಇದನ್ನೂ ಓದಿ:Bantwal: ಹಳೆಯ ವೈಷಮ್ಯದಿಂದ ಸ್ನೇಹಿತನ ಕೊಲೆ ಯತ್ನ, ಒಂದು ಕೈ ತುಂಡು
ಕಳೆದ ವರ್ಷ ಜೂನ್ ನಲ್ಲಿ ಎನ್ ಐಎ ದಾಖಲಿಸಿದ್ದ ಪ್ರಕರಣದಲ್ಲಿ ಈ ಆರೋಪಿ ಭಾಗಿಯಾಗಿದ್ದ. ಹಲವಾರು ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರು ಮತ್ತು ಓವರ್ ಗ್ರೌಂಡ್ ವರ್ಕರ್ಸ್ (ಒಜಿಡಬ್ಲ್ಯುಗಳು) ನಡೆಸುತ್ತಿರುವ ಪಿತೂರಿಗಳ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿದೆ. ಪಾಕಿಸ್ತಾನದಲ್ಲಿರುವ ಜೆಇಎಂ ಕಮಾಂಡರ್‌ಗಳ ನಿರ್ದೇಶನದ ಮೇರೆಗೆ ಈ ಪಿತೂರಿಗಳನ್ನು ನಡೆಸಲಾಯಿತು.