ಕಳೆದ ಜೂನ್‌ನಲ್ಲಿ ಐಸಿಸ್ ಜತೆ ಸಂಪರ್ಕ ಅಪಾದನೆ ಮೇರೆಗೆ ಕೊಯಮತ್ತೂರಿನಲ್ಲಿ ಮೊಹಮ್ಮದ್ ಅಜರುದ್ದೀನ್ ಹಾಗೂ ಶೇಖ್ ಹಿದಾಯತುಲ್ಲಾನನ್ನು ಬಂಧಿಸಲಾಗಿತ್ತು. ತನಿಖೆ ಮುಂದುವರಿಸಿದ ಎನ್‌ಐಎ, ತಂಜಾವೂರಿನ ಅಲಾವುದ್ದೀನ್ ಹಾಗೂ ತಿರುಚಿರಾಪಳ್ಳಿಯ ಎಸ್.ಸಫುìದ್ದೀನ್ ಮನೆಯಲ್ಲಿ ಶೋಧ ನಡೆಸಿ, 2 ಲ್ಯಾಪ್‌ಟಾಪ್, 6 ಮೊಬೈಲ್, 11 ಸಿಮ್‌ಕಾರ್ಡ್, ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್, ಮೆಮೋರಿ ಕಾರ್ಡ್, ಸಿಡಿ, ಡಿವಿಡಿ, ಡಿಜಿಟಲ್ ಡಿವೈಸ್ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಈ ವಸ್ತುಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಹಾಗೂ ವಿಧಿ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಕೊಯಮತ್ತೂರಿನ ಆರು ಮಂದಿ ವಿರುದ್ಧ ಎಫ್ಐಆರ್ ದಾಖಸಲಾಗಿತ್ತು. ಇವರು ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ನೇಮಿಸಿಕೊಂಡು, ಕೇರಳ ಹಾಗೂ ತಮಿಳುನಾಡಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಚಿಂತನೆ ಹೊಂದಿದ್ದರು ಎಂದು ಎನ್‌ಐಎ ತಿಳಿಸಿದೆ.
Advertisement