ಲಕ್ನೋ : ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿನ ಸರಕಾರಿ ಆರೋಗ್ಯ ಕೇಂದ್ರವೊಂದರಲ್ಲಿ ವಾರ್ಡ್ ಬಾಯ್ ಒಬ್ಬ ವೈದ್ಯನಾಗಿ ಮತ್ತು ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂಬ ಆರೋಪಗಳ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಉತ್ತರ ಪ್ರದೇಶ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ಬಾರಾಬಂಕಿ ಜಿಲ್ಲೆಯ ಸರಾಯ್ ಗೋಪಿ ಸಾರ್ವಜನಿಕ ಆರೋಗ್ಯ ಕೇ,ದ್ರದಲ್ಲಿ ವಾರ್ಡ್ ಬಾಯ್ ಒಬ್ಬ ವೈದ್ಯನಾಗಿ ಮತ್ತು ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ವರದಿಯನ್ನು ಗಮನಿಸಿದ ಎನ್‌ಎಚ್‌ಆರ್‌ಸಿ ಸ್ವಪ್ರೇರಣೆಯಿಂದ ಉತ್ತರ ಪ್ರದೇಶ ಸರಕಾರಕ್ಕೆ ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ನೊಟೀಸ್ ಜಾರಿ ಮಾಡಿತು.
ಸರಾಯ್ ಗೋಪಿ ಪಿಎಚ್‌ಸಿಯಲ್ಲಿ ಯಾವುದೇ ಸೌಕರ್ಯಗಳು ಇಲ್ಲದಿರುವ ಕಾರಣ ಅಲ್ಲಿಗೆ ಸ್ಥಳೀಯರು ಯಾರೂ ಹೋಗುವುದಿಲ್ಲ ಎಂದು ಮಾಧ್ಯಮ ವರದಿ ತಿಳಿಸಿತ್ತು.
ಈ ಆರೋಗ್ಯ ಕೇಂದ್ರಕ್ಕೆ ನಿಯೋಜಿತನಾಗಿದ್ದ ವೈದ್ಯನು ಹದಿನೈದು ದಿನಕ್ಕೆ ಇಲ್ಲಿಗೆ ಭೇಟಿ ಕೊಡುತ್ತಿದ್ದರೆ ಇಲ್ಲಿನ ಫಾರ್ಮಾಸಿಸ್ಟ್ ಸದಾ ಗೈರಾಗಿರುತ್ತಾನೆ ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು.