Advertisement

ರಾ.ಹೆ. 66: ಹೊಂಡ ಮುಕ್ತಿ ಕಾಮಗಾರಿಗೆ ಚಾಲನೆ

09:58 AM Jan 31, 2020 | sudhir |

ಕಾಪು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿಯಿಂದ ಕುಂದಾಪುರ ವರೆಗೆ ರಸ್ತೆ ಬದಿಯಲ್ಲಿರುವ ಮಾರಣಾಂತಿಕ ಹೊಂಡಗಳನ್ನು ಮುಚ್ಚಿ, ಪಾದಚಾರಿ ಮಾರ್ಗ ಮತ್ತು ಹೆದ್ದಾರಿಯನ್ನು ಸಮತಟ್ಟು ಮಾಡುವ ದುರಸ್ತಿಗೆ ಹೆದ್ದಾರಿ ನಿರ್ವಹಣೆಯ ಗುತ್ತಿಗೆದಾರ ಕಂಪೆನಿ ಈಗ ಚಾಲನೆ ನೀಡಿದೆ.

Advertisement

ನವಯುಗ ಕಂಪೆನಿಯು ಗುತ್ತಿಗೆ ವಹಿಸಿಕೊಂಡಿರುವ ರಾ.ಹೆ. 66ರ ಕುಂದಾಪುರ- ತಲಪಾಡಿ ಚತುಷ್ಪಥ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಅಪಾಯಕಾರಿ ಹೊಂಡಗಳು ಸೃಷ್ಟಿಯಾಗಿವೆ.

ಇದರಿಂದ ದ್ವಿಚಕ್ರ, ತ್ರಿಚಕ್ರ ಸಹಿತ ವಿವಿಧ ವಾಹನಗಳು ನಿರಂತರ ಅಪಘಾತಕ್ಕೀಡಾಗುತ್ತಿವೆ. ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪೆನಿಯ ನಿರ್ಲಕ್ಷ Âದ ಬಗ್ಗೆ ದೂರು ಕೇಳಿಬಂದಿತ್ತು. ಈಗ ಚತುಷ್ಪಥ ರಸ್ತೆ ಮತ್ತು ಪಾದಚಾರಿ ಮಾರ್ಗದ ನಡುವಿನ ರಸ್ತೆಯ ಅಂಚುಗಳ ಎತ್ತರವನ್ನು ಕುಗ್ಗಿಸುವ ಕಾಮಗಾರಿಗೆ ಉದ್ಯಾವರದಲ್ಲಿ ಚಾಲನೆ ನೀಡಲಾಗಿದ್ದು, ಫೆಬ್ರವರಿ ತಿಂಗಳಾಂತ್ಯದವರೆಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ.

12 ಲಕ್ಷ ರೂ. ವೆಚ್ಚ
ಮೂರು ಟೋಲ್‌ ಪ್ಲಾಜಾಗಳ ವ್ಯಾಪ್ತಿಯ 95 ಕಿ.ಮೀ. ಹೆದ್ದಾರಿ ಬದಿಗೆ ಮಣ್ಣು ಹಾಕಿ ಸಮತಟ್ಟು ಮಾಡುವ ಕಾಮಗಾರಿಗೆ 12 ಲಕ್ಷ ರೂ. ಅಂದಾಜಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ 1,500ಕ್ಕೂ ಅಧಿಕ ಲೋಡ್‌ ಮಣ್ಣು ಅಗತ್ಯವಿದ್ದು, ಸರಬರಾಜು ಗುತ್ತಿಗೆಯನ್ನು ಸ್ಥಳೀಯರಿಗೂ ನೀಡಲಾಗಿದೆ.

ಎಲ್ಲೆಲ್ಲಿ ಕಾಮಗಾರಿ?
ನವಯುಗ ಕಂಪೆನಿಯ ನಿರ್ವಹಣೆಯಲ್ಲಿರುವ ಕುಂದಾಪುರದಿಂದ ತಲಪಾಡಿ ನಡುವೆ, ಸಾಸ್ತಾನ, ಹೆಜಮಾಡಿ ಮತ್ತು ತಲಪಾಡಿ ಟೋಲ್‌ ಪ್ಲಾಜಾಗಳ ವ್ಯಾಪ್ತಿಯಲ್ಲಿ ಕಾಮಗಾರಿಗೆ ಚಾಲನೆ ದೊರಕಿದೆ. ಕುಂದಾಪುರದಿಂದ ಉದ್ಯಾವರ, ಉದ್ಯಾವರದಿಂದ ಮುಕ್ಕ, ನಂತೂರು ಜಂಕ್ಷನ್‌ನಿಂದ ತಲಪಾಡಿ ವರೆಗೆ ಹೆದ್ದಾರಿ ಮತ್ತು ಪಾದಚಾರಿ ಮಾರ್ಗದ ನಡುವೆ ಫಿಲ್ಲಿಂಗ್‌ ನಡೆಯಲಿದೆ.

Advertisement

95 ಕಿ.ಮೀ. ವ್ಯಾಪ್ತಿಯಲ್ಲಿ ಫಿಲ್ಲಿಂಗ್‌
ಸಾಸ್ತಾನ ಟೋಲ್‌ ವ್ಯಾಪ್ತಿ: ಕುಂದಾಪುರ- ಉದ್ಯಾವರ ನಡುವಣ 41 ಕಿ.ಮೀ.

ಹೆಜಮಾಡಿ ಟೋಲ್‌ ವ್ಯಾಪ್ತಿ:
ಉಡುಪಿಯ ಉದ್ಯಾವರ – ಮುಕ್ಕ ನಡುವಣ 39 ಕಿ.ಮೀ.

ತಲಪಾಡಿ ಟೋಲ್‌ ವ್ಯಾಪ್ತಿ:
ನಂತೂರು ಜಂಕ್ಷನ್‌- ತಲಪಾಡಿ ನಡುವಣ 15 ಕಿ.ಮೀ.

ತಿಂಗಳಿಗೆ 2 ಲಕ್ಷ ರೂ. ದಂಡ ಉಳಿಕೆ
ರಾ.ಹೆ. 66ರ ಇಕ್ಕೆಲಗಳಲ್ಲಿನ ಪಾದಚಾರಿ ಮಾರ್ಗ ಮತ್ತು ಹೆದ್ದಾರಿ ರಸ್ತೆ ನಡುವೆ ಅಂತರ ಹೆಚ್ಚಿದ್ದು, ಕೆಲವೆಡೆ ಹೊಂಡಗಳೂ ಇರುವುದರಿಂದ ಅಪಾಯದ ಭೀತಿಯಿದೆ. ಹೊಂಡಗಳ ಆಳ ಹೆಚ್ಚಿರುವುದರಿಂದ ರಸ್ತೆಗೂ ಅಪಾಯವಿದೆ. ರಸ್ತೆ ಬಿರುಕು ಬಿಡುವ ಸಾಧ್ಯತೆಯಿದ್ದು, ಈ ಹೊಂಡಗಳು ಮತ್ತು ನಿರ್ವಹಣೆಯ ನಿರ್ಲಕ್ಷ Âಕ್ಕಾಗಿ ಕಂಪೆನಿಯು ಹೆದ್ದಾರಿ ಇಲಾಖೆಗೆ ಪ್ರತೀ ತಿಂಗಳು ಕನಿಷ್ಠ 2 ಲಕ್ಷ ರೂ. ವರೆಗೆ ದಂಡ ಕಟ್ಟುವ ಅನಿವಾರ್ಯತೆ ಉಂಟಾಗಿತ್ತು ಎನ್ನುತ್ತಾರೆ ನವಯುಗ ಕಂಪೆನಿಯ ಅಧಿಕಾರಿಗಳು.

ಪ್ರತೀ ವರ್ಷ ಮಳೆಗಾಲಕ್ಕೆ ಮುನ್ನ ಮಣ್ಣು ಹಾಕುವ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ ಹಾಗೆ ಹಾಕಿದ ಮಣ್ಣು ಕೊಚ್ಚಿ ಹೋಗಿ, ಮತ್ತೆ ಅದೇ ಸ್ಥಿತಿ ನಿರ್ಮಾಣವಾಗುತ್ತಿತ್ತು. ಅದನ್ನು ತಪ್ಪಿಸಲು ಈ ಬಾರಿ ಬೇಗನೆ ಕಾಮಗಾರಿ ಆರಂಭಿಸಲಾಗಿದೆ. ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು
– ಶಿವಪ್ರಸಾದ್‌, ಪ್ರಬಂಧಕರು, ನವಯುಗ ಟೋಲ್‌

Advertisement

Udayavani is now on Telegram. Click here to join our channel and stay updated with the latest news.

Next